ಎಮು ಪಕ್ಷಿ ಸಾವು: ಹಕ್ಕಿಜ್ವರ ಭೀತಿ
ಶಿವಮೊಗ್ಗ: ಹಕ್ಕಿಜ್ವರ ಭೀತಿ ನಡುವೆ ತ್ಯಾವರಕೊಪ್ಪದಲ್ಲಿರುವ ಸಿಂಹಧಾಮದಲ್ಲಿ ಎಮು ಪಕ್ಷಿ ಭಾನುವಾರ ಮೃತಪಟ್ಟಿದ್ದು, ಅಂಗಾಗ ಮತ್ತು ರಕ್ತದ ಮಾದರಿಗಳನ್ನು ಬೆಂಗಳೂರು ಹಾಗೂ ಭೋಪಾಲ್ನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
‘ಇದರ ಸಾವಿಗೆ ಪರಸ್ಪರ ಕಿತ್ತಾಟವೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇಲ್ಲಿ 6 ಎಮುಗಳಿದ್ದವು. ಪಶು ಸಂಗೋಪನೆ ಇಲಾಖೆ ವೈದ್ಯರು ಮೃತಪಕ್ಷಿಯ ಪರೀಕ್ಷೆ ನಡೆಸಿದ್ದಾರೆ. ಪಕ್ಷಿ ಜ್ವರದ ಭೀತಿ ಇರುವ ಕಾರಣ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಸಫಾರಿಯ ನಿರ್ದೇಶಕ ಮುಕುಂದ್ಚಂದ್ ತಿಳಿಸಿದರು.
‘ಒಂದೂವರೆ ವರ್ಷದ ಹಿಂದೆಯೂ ಒಂದು ಎಮು ಪಕ್ಷಿ ಸಾವಿಗೀಡಾಗಿತ್ತು. ಹಕ್ಕಿಜ್ವರದ ಭೀತಿಯ ಕಾರಣ ಔಷಧಗಳನ್ನು ಸಿಂಪಡಿಸಲಾಗಿದೆ. ಸಿಬ್ಬಂದಿಗೆ ಮುಂಜಾಗ್ರತೆ ಕುರಿತು ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.