ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾಲತ್‌ನಲ್ಲಿ ಒಂದಾದ ದಂಪತಿ

Last Updated 1 ಅಕ್ಟೋಬರ್ 2021, 4:54 IST
ಅಕ್ಷರ ಗಾತ್ರ

ಹೊಸನಗರ: ಇಲ್ಲಿನ ನ್ಯಾಯಾಲಯದಲ್ಲಿಗುರುವಾರ ನಡೆದ ಲೋಕ ಅದಾಲತ್‌ನಲ್ಲಿವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಇಬ್ಬರು ದಂಪತಿಯನ್ನು ಒಂದು ಮಾಡಿತು.

ಸಿದ್ಧಾಪುರದ ಇಲಿಯಾಸ್ ಮತ್ತು ನಾವೀದ್ ಹಾಗೂ ರಿಪ್ಪನ್‌ಪೇಟೆಯ ಬಿನ್ಸಿ ಮತ್ತು ದಿನೇಶ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಮರಳಿ ಒಂದಾದರು.

ದಂಪತಿಯನ್ನು ನ್ಯಾಯಾಧೀಶರು ಸೇರಿ ವಕೀಲರು ಪ್ರಶಂಸಿಸಿ, ಹೂವಿನ ಹಾರ ಹಾಕಿ ಶುಭ ಹಾರೈಸಿದರು.

ಹಿರಿಯ ವ್ಯವಹಾರ ನ್ಯಾಯಾಧೀಶರಾದ ಕೆ. ಪುಷ್ಪಲತಾ ಮಾತನಾಡಿ, ‘ಯಾವುದೋ ಒಂದು ಸಣ್ಣ ವಿಷಯಕ್ಕೆ ಪತಿ–ಪತ್ನಿ ಜಗಳ ಮಾಡಿಕೊಂಡು ವಿಚ್ಛೇದನ ಪಡೆಯುವ ಪ್ರಕರಣಗಳು ಹೆಚ್ಚುತ್ತಿವೆ. ದಂಪತಿ ತಾಳ್ಮೆಯಿಂದ ಆಲೋಚಿಸಿದರೆ ತಪ್ಪಿನ ಅರಿವು ತಿಳಿಯುತ್ತದೆ. ಅದರೆ ಅಷ್ಟರ ಒಳಗೆ ಕಾಲ ಮಿಂಚಿ ಹೋಗಿರುತ್ತದೆ. ಯಾವುದೇ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಲಿ. ಮುಂದಿನ ದಿನಗಳಲ್ಲಿವಿಚ್ಛೇದನ ಪ್ರಕರಣಗಳನ್ನು ಸಂಧಾನದ ಮೂಲಕವೇ ಬಗೆ ಹರಿಸಲು ಪ್ರಯತ್ನಿಸಬೇಕು’ ಎಂದರು.

ನ್ಯಾಯಾಧೀಶ ರವಿಕುಮಾರ್ ಮಾತನಾಡಿದರು. ವಕೀಲರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT