ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಉಚಿತ ವಿದ್ಯುತ್‌ ನೀಡಿದ್ದು ಬಿಜೆಪಿ: ಬಿ.ವೈ. ರಾಘವೇಂದ್ರ

Published 8 ಜುಲೈ 2023, 16:02 IST
Last Updated 8 ಜುಲೈ 2023, 16:02 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಕಾಂಗ್ರೆಸ್‌ ಎಂದಿಗೂ ಬಡವರ ಪರವಾಗಿ ಕಾನೂನು ರೂಪಿಸಿಲ್ಲ. ರಾಜ್ಯ ಕಾಂಗ್ರೆಸ್‌ ಸರ್ಕಾರ ಉಚಿತ ಗ್ಯಾರಂಟಿ ಯೋಜನೆ ಘೋಷಿಸಿ ಬಡವರನ್ನು ಮೋಸ ಮಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಉಚಿತ ವಿದ್ಯುತ್‌, ಪರಿಶಿಷ್ಟ ಜಾತಿ, ಪಂಗಡಕ್ಕೆ 75 ಯುನಿಟ್‌ ಉಚಿತ ವಿದ್ಯುತ್ ನೀಡಿದ್ದೇವೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ವಿದ್ಯಾಧಿರಾಜ ಸಭಾಭವನದಲ್ಲಿ ಬಿಜೆಪಿ ಆಯೋಜಿಸಿದ್ದ ವಿವಿಧ ಮೋರ್ಚಾಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷದ ಅವಧಿಯಲ್ಲಿ 80 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದೆ. 2024ರ ವೇಳೆಗೆ ಹೆಚ್ಚುವರಿ 25,000 ಕಿ.ಮೀ. ರಸ್ತೆ ನಿರ್ಮಾಣವಾಗಲಿದೆ. ಇದರಿಂದ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಿದೆ ಎಂದರು.

‘ಎಲ್ಲರಿಗೂ ಸರ್ಕಾರಿ ಉದ್ಯೋಗ ನೀಡಿದರೆ ಕೃಷಿ, ಹೋಟೆಲ್‌, ಗ್ಯಾರೇಜ್‌ ಮುಂತಾದ ಕಡೆಗಳಲ್ಲಿ ಉದ್ಯೋಗ ಮಾಡುವವರು ಯಾರು’ ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ವೇದಿಕೆಯಲ್ಲಿ ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಬೇಗುವಳ್ಳಿ ಕವಿರಾಜ್, ರಕ್ಷಿತ್‌ ಮೇಗರವಳ್ಳಿ, ಮುಖಂಡರಾದ ನಾಗರಾಜ್‌ ಶೆಟ್ಟಿ, ಆರ್‌ ಮದನ್‌, ಅಶೋಕ್‌ ಮೂರ್ತಿ, ಸಾಲೇಕೊಪ್ಪ ರಾಮಚಂದ್ರ, ಬೇಗುವಳ್ಳಿ ಸತೀಶ್‌, ಕಾಸರವಳ್ಳಿ ಶ್ರೀನಿವಾಸ್, ಸಿ.ಬಿ. ಈಶ್ವರ್‌ ಇದ್ದರು.

Quote - ಮಹಾತ್ಮ ಗಾಂಧಿ ಯಾವತ್ತೂ ಸುಳ್ಳು ಹೇಳಿಲ್ಲ. ಗಾಂಧಿ ಪ್ರಶಸ್ತಿ ಪಡೆದ ಕಿಮ್ಮನೆ ರತ್ನಾಕರ ಅವರು ಸುಳ್ಳು ಹೇಳಲು ಒಂದು ದಿನ ಶಿವಮೊಗ್ಗದಲ್ಲಿ ಪಥ್ಯ ಮಾಡಿದ್ದಾರೆ ಬಿ.ವೈ. ರಾಘವೇಂದ್ರ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT