ಮಂಗಳವಾರ, ನವೆಂಬರ್ 24, 2020
22 °C

ದಣಿವರಿಯದ ಹೋರಾಟಗಾರ ಮಾರುತಿ ಮಾನ್ಪಡೆ :ನಾಗೇಶ್ ಕೆ.ವಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ದಮನಿತರ, ಶೋಷಿತರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ ಮಾರುತಿ ಮಾನ್ಪಡೆ ದಣಿವರಿಯದ ಹೋರಾಟಗಾರರಾಗಿದ್ದರು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ನಾಗೇಶ್ ಕೆ.ವಾಲೆ ಹೇಳಿದರು.

ಮಾರುತಿ ಮಾನ್ಪಡೆ ಅವರಿಗೆ ಶನಿವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಪಂಚಾಯಿತಿ ನೌಕರರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷರಾಗಿ ಮಾನ್ಪಡೆಯವರು ಸಲ್ಲಿಸಿರುವ ಸೇವೆ ಅನನ್ಯ. ನೌಕರರ ಸಂಘಟನೆ ಹಾಗೂ ಸರ್ಕಾರದ ನಡುವೆ ಅವರು ಕೊಂಡಿಯಾಗಿದ್ದರು ಎಂದರು.

ವೈಯಕ್ತಿಕ ಬದುಕಿನಲ್ಲಿ ಅತ್ಯಂತ ಸರಳವಾಗಿದ್ದ ಮಾನ್ಪಡೆ ಯಾವುದೇ ಕ್ಷೇತ್ರದಲ್ಲಿ ದುಡಿಯುವ ವರ್ಗದವರಿಗೆ ಅನ್ಯಾಯವಾದರೆ ಅದನ್ನು ಸಹಿಸುತ್ತಿರಲಿಲ್ಲ. ಜನಪರವಾದ ಹೋರಾಟ ಎಲ್ಲೇ ನಡೆಯುತ್ತಿದ್ದರೂ ಅದಕ್ಕೆ ತಮ್ಮ ಬೆಂಬಲ ಸೂಚಿಸುವ ಔದಾರ್ಯ ಹೊಂದಿದ್ದರು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಎಂ.ಕಮ್ಮಾರ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಮುಖರಾದ ನಾಗರಾಜ್, ಮಂಜಪ್ಪ, ಶ್ರೀಧರ್, ಗುತ್ಯಪ್ಪ, ಷಣ್ಮುಖ, ಮಂಜುನಾಥ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.