ಮಡೆನೂರು (ತುಮರಿ): ಶರಾವತಿ ಜಲಾನಯನ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ಒಡಲಿನಲ್ಲಿರುವ ಪುರಾತನ ಹಿರೇಭಾಸ್ಕರ (ಮಡೆನೂರು) ಆಣೆಕಟ್ಟು ಮತ್ತೆ ನೀರಿನಲ್ಲಿ ಮುಳುಗಿದೆ.

ಕಣಿವೆ ಭಾಗದಲ್ಲಿ ಮಳೆ ಪ್ರಮಾಣ ನಿರಂತರ ಹೆಚ್ಚಳದಿಂದ ಲಿಂಗನಮಕ್ಕಿ ಜಲಾಶಯಕ್ಕೆ ಆಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಜುಲೈ 25ಕ್ಕೆ ಜಲಾಶಯದ ನೀರಿನ ಮಟ್ಟ 1,802 ಅಡಿ ಏರಿಕೆಯಾಗಿದ್ದು, ಹಿರೇಭಾಸ್ಕರ ಆಣೆಕಟ್ಟು ಸಂಪೂರ್ಣ ನೀರಿನಲ್ಲಿ ಜಲಾವೃತವಾಗಿದೆ. ಹಿರೇಭಾಸ್ಕರ ಅಣೆಕಟ್ಟು ಸಾಮರ್ಥ್ಯ 1,778 ಅಡಿ ಮಾತ್ರ. 1964ರಿಂದ ನಿರಂತರವಾಗಿ ಪ್ರತಿವರ್ಷ ಮಳೆಗಾಲದಲ್ಲಿ ಈ ಆಣೆಕಟ್ಟು ಮುಳುಗಡೆಯಾಗುತ್ತದೆ.

ಪ್ರತಿ ವರ್ಷ ಬೇಸಿಗೆಯ ಮೇ ತಿಂಗಳಲ್ಲಿ ಮಾತ್ರ ಪ್ರವಾಸಿಗರಿಗೆ ಗೋಚರಿಸುವ ಆಣೆಕಟ್ಟು ವೀಕ್ಷಣೆಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅನುಮತಿ ಬೇಕಿದೆ. ಈ ವರ್ಷ ಮೇ 15 ರಿಂದ ಜೂನ್ 5ರವರೆಗೆ 8,000ಕ್ಕೂ ಅಧಿಕ ಪ್ರವಾಸಿಗರು ಆಣೆಕಟ್ಟು ವೀಕ್ಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.