ಬುಧವಾರ, ಮೇ 25, 2022
29 °C

ಶಿವಮೊಗ್ಗ: ಮೆಗ್ಗಾನ್‌ ಆಸ್ಪತ್ರೆಗೆ ವೆಂಟಿಲೇಟರ್ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೆನರಾ ಬ್ಯಾಂಕ್ ಸಾಮಾಜಿಕ ಚಟುವಟಿಕೆಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕೆ. ರಾಮಾನಾಯ್ಕ್ ಹೇಳಿದರು.

ಇಲ್ಲಿನ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಶುಕ್ರವಾರ ₹ 10 ಲಕ್ಷ ಮೌಲ್ಯದ ವೆಂಟಿಲೇಟರ್ ಅನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.

ಬ್ಯಾಂಕ್‌ನಿಂದ ಕೊರೊನಾ ಸಂದರ್ಭದಲ್ಲಿ ಅನೇಕ ಕಡೆ ಅಗತ್ಯಕ್ಕೆ ಅನುಗುಣವಾಗಿ ಸಹಕಾರ ನೀಡುತ್ತಾ ಬಂದಿದೆ. ಆಂಬುಲೆನ್ಸ್, ವೆಂಟಿಲೇಟರ್, ವೀಲ್ ಚೇರ್, ತುರ್ತು ಔಷಧಗಳನ್ನು ವಿತರಿಸಿದೆ ಎಂದರು.

ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ 79 ಶಾಖೆ ಹೊಂದಿದ್ದು, ಕೊರೊನಾ ಸಂಕಷ್ಟದದಲ್ಲಿ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದೆ. ವಿಶೇಷ ಯೋಜನೆಗಳನ್ನು ಪ್ರಕಟಿಸಿದೆ. ಹೊಸ ಹೊಸ ರೀತಿಯ ಸಾಲವನ್ನು ನೀಡಿದೆ. ಅತ್ಯಂತ ಕಡಿಮೆ ದರದಲ್ಲಿ ಬಂಗಾರ ಮತ್ತು ಮನೆ ಕಟ್ಟಲು ಸಾಲವನ್ನು ನೀಡಿದ್ದು, ಕೆನರಾ ಚಿಕಿತ್ಸಾ ಮತ್ತು ಕೆನರಾ ಸುರಕ್ಷಾ ಯೋಜನೆಯಡಿ ಸಹಾಯ ಹಸ್ತ ಚಾಚಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೇಯರ್ ಸುನಿತಾ ಅಣ್ಣಪ್ಪ, ‘ನಗರದಲ್ಲಿ ಕೊರೊನಾ ಉಲ್ಬಣಿಸಿದಾಗ ಆತಂಕ ಉಂಟಾಗಿತ್ತು. ಕೆನರಾ ಬ್ಯಾಂಕ್ ಮಕ್ಕಳ ವಿಭಾಗಕ್ಕೆ ತುರ್ತು ಅಗತ್ಯವಿದ್ದ ವೆಂಟಿಲೇಟರ್ ನೀಡಿದೆ. ದಸರಾದಲ್ಲೂ ಬ್ಯಾಂಕ್ ಕೈಜೋಡಿಸಿದೆ’ ಎಂದರು.

ಬ್ಯಾಂಕ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಂದೀಪ್ ರಾವ್, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ಧೀರರಾಜ್ ಹೊನ್ನವಿಲೆ, ಅನಿತಾ ರವಿಶಂಕರ್, ಡಾ. ಶ್ರೀಧರ್, ಡಾ. ಸಿದ್ಧನಗೌಡ ಪಾಟೀಲ್, ಡಾ. ಮಂಜುನಾಥ್, ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು