ಬುಧವಾರ, ಮೇ 25, 2022
26 °C

ಹಣಕ್ಕಾಗಿ ತನ್ನ ಪತ್ನಿಯದ್ದೇ ಬೆತ್ತಲೆ ವಿಡಿಯೊ ಮಾಡಿ ಪತಿ ಬ್ಲ್ಯಾಕ್‌ಮೇಲ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತನ್ನ ಪತ್ನಿಯ ಬೆತ್ತಲೆ ವಿಡಿಯೊ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟ ಪತಿ ವಿರುದ್ಧ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಪತಿ ಸಲ್ಮಾನ್‌, ಅತ್ತೆ ಸಾಹಿರಾ, ಮಾವ ಶೌಕತ್‌ ಖಾನ್, ನಾದಿನಿ ಸಮೀನಾ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ.

ಹುಂಚ ಹೋಬಳಿಯ ಸಂತ್ರಸ್ತೆಯ ವಿವಾಹ ಎಂಟು ತಿಂಗಳ ಹಿಂದೆ ಸಲ್ಮಾನ್‌ ಜತೆ ನಡೆದಿತ್ತು. ವಧುವಿನ ತಂದೆ ಒಪ್ಪಂದದಂತೆ ಮದುವೆ ಸಮಯದಲ್ಲಿ ಪೂರ್ಣ ವರದಕ್ಷಿಣೆ ನೀಡಿರಲಿಲ್ಲ. ₹ 1 ಲಕ್ಷ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಸಂಧಾನ ನಡೆದರೂ ಸಮಸ್ಯೆ ಬಗೆಹರಿದಿರಲಿಲ್ಲ. ವರದಕ್ಷಿಣೆ ಕಿರುಕುಳ ಮುಂದುವರಿದಿತ್ತು.

ಈ ಮಧ್ಯೆ ಸಲ್ಮಾನ್ ಪತ್ನಿ ನಗ್ನವಾಗಿರುವ ಕ್ಷಣಗಳ ವಿಡಿಯೊ ಚಿತ್ರೀಕರಿಸಿಕೊಂಡು ಹಣ ತರದಿದ್ದರೆ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಿದ್ದಾನೆ. ತಲಾಕ್‌ ನೀಡಿದ್ದಾನೆ. ತವರು ಮನೆಗೆ ಮರಳಿದರೂ ಬೆದರಿಕೆ ನಿಂತಿಲ್ಲ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು