ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸನಗರ: ಒಂದೇ ಗಂಟೆ ಅಂತರದಲ್ಲಿ ದಂಪತಿ ಸಾವು

Published 11 ಜನವರಿ 2024, 16:47 IST
Last Updated 11 ಜನವರಿ 2024, 16:47 IST
ಅಕ್ಷರ ಗಾತ್ರ

ಹೊಸನಗರ: ಪತಿ ಅಗಲಿದ ಒಂದೇ ಗಂಟೆಯ ಅಂತರದಲ್ಲಿ ಪತ್ನಿಯೂ ನಿಧನರಾದ ಘಟನೆ ತಾಲ್ಲೂಕಿನ ಸಾಲ್ತೋಡಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಂತೂರು ಗ್ರಾಮದ ಸಾಲ್ತೋಡಿ ಕೃಷಿಕ ದಂಪತಿಗಳಾದ ಹೊಳೆಯಪ್ಪ (90) ಮತ್ತು ಗಂಗಮ್ಮ (84) ಮೃತರು.

ಅನಾರೋಗ್ಯದಿಂದ ಬಳಲುತಿದ್ದ ಪತಿ ಹೊಳೆಯಪ್ಪ ಅವರು ಗುರುವಾರ ಬೆಳಗಿನ ಜಾವ ನಿಧನರಾದರು. ಪತಿಯ ಸಾವಿನಿಂದ ಅಸ್ವಸ್ಥರಾದ ಗಂಗಮ್ಮ ಒಂದು ಗಂಟೆ ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. 

ಇವರಿಗೆ ಐವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT