ಗುರುವಾರ , ಮೇ 26, 2022
26 °C

ಶಿವಮೊಗ್ಗ: ಚಲಿಸುವ ರೈಲಿನಿಂದ ಬಿದ್ದ ಮಹಿಳೆ– ಸಿನಿಮೀಯ ರೀತಿ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಇಲ್ಲಿನ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಬಿದ್ದ ಮಹಿಳೆಯೊಬ್ಬರನ್ನು ರೈಲ್ವೆ ಪೊಲೀಸರು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ. 

ಅಲ್ಲೇ ಇದ್ದ ಪೊಲೀಸರ ಸಕಾಲಿಕ ನೆರವು ದೊರೆತ ಕಾರಣ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಈ ಘಟನೆ ಮಂಗಳವಾರ ಬೆಳಿಗ್ಗೆ 7.5ರ ಸುಮಾರಿಗೆ ನಡೆದಿದೆ. ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ಬೆಳಿಗ್ಗೆ 6.55ಕ್ಕೆ ಶಿವಮೊಗ್ಗ ರೈಲುನಿಲ್ದಾಣ ತಲುಪಿತ್ತು. 7.05ಕ್ಕೆ ರೈಲು ಬೆಂಗಳೂರಿನ ಕಡೆ ಹೊರಟಿತ್ತು. ಸಂಬಂಧಿಕರನ್ನು ಹತ್ತಿಸಲು ಬಂದಿದ್ದ ಮಹಿಳೆ ರೈಲು ಹೊರಡುತ್ತಿದ್ದಂತೆ ಗಾಬರಿಯಿಂದ ಇಳಿಯಲು ಮುಂದಾಗಿದ್ದಾರೆ. ಪ್ಲಾಟ್‌ಫಾರಂಗೆ ಕಾಲಿಡುತ್ತಿದ್ದಂತೆ ಉರುಳಿ ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಪೊಲೀಸ್ ಅಣ್ಣಪ್ಪ, ಸಂತೋಷ್‌ ಕುಮಾರ್, ರೈಲ್ವೆ ಸುರಕ್ಷಾ ಪಡೆಯ ಜಗದೀಶ್ ಅವರನ್ನು ರಕ್ಷಿಸಿದ್ದಾರೆ.

ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರೈಲ್ವೆ ಇಲಾಖೆಯ ಅಧಿಕಾರಿಗಳು ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು