ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈಕ್ವೆಸ್ಟ್ರಿಯನ್ ವಿಭಾಗ: ಅನುಷ್ ಕೊರಳಿಗೆ ಕಂಚು

ಈಕ್ವೆಸ್ಟ್ರಿಯನ್ ವೈಯಕ್ತಿಕ ಡ್ರೆಸಾಜ್‌ನಲ್ಲಿ ಒಲಿದ ಪದಕ
Published : 28 ಸೆಪ್ಟೆಂಬರ್ 2023, 13:33 IST
Last Updated : 28 ಸೆಪ್ಟೆಂಬರ್ 2023, 13:33 IST
ಫಾಲೋ ಮಾಡಿ
Comments

ಹಾಂಗ್‌ಝೌ : ಭಾರತದ ಅನುಷ್ ಅಗರವಾಲಾ ಏಷ್ಯನ್ ಕ್ರೀಡಾಕೂಟದ ಈಕ್ವೆಸ್ಟ್ರಿಯನ್ ವಿಭಾಗದ ವೈಯಕ್ತಿಕ ಡ್ರೆಸಾಜ್‌ ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಈ ಸ್ಪರ್ಧಾ ವಿಭಾಗದ ಇತಿಹಾಸದಲ್ಲಿ ಭಾರತಕ್ಕೆ ಬಂದ ಮೊಟ್ಟಮೊದಲ ಪದಕ ಇದಾಗಿದೆ.

ಗುರುವಾರ ನಡೆದ ಸ್ಪರ್ಧೆಯಲ್ಲಿ ತಮ್ಮ ಅಸ್ಟ್ರೈಡ್ ಎಟ್ರೊ ಹೆಸರಿನ ಕುದುರೆಯ ಮೇಲೆ ಸವಾರಿ ಮಾಡಿದ ಅನುಷ್ 73.030 ಅಂಕಗಳನ್ನು ಗಳಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಈಕ್ವೆಸ್ಟ್ರಿಯನ್‌ನಲ್ಲಿ ಭಾರತಕ್ಕೆ ಒಲಿದ ಎರಡನೇ ಪದಕ ಇದು.

ಮಲೇಷ್ಯಾದ ಬಿನ್ ಮಹಮದ್ ಫಾತಿಲ್ ಮೊಹಮದ್ ಖಾಬಿಲ್ ಅಂಬಕ್ (75.780) ಚಿನ್ನ ಜಯಿಸಿದರು. ಹಾಂಗ್‌ಕಾಂಗ್‌ ದೇಶದ ಜಾಕ್ಲಿನ್ ವಿಂಗ್ ಯೀಂಗ್ ಸಿಯು (73.450) ಬೆಳ್ಳಿ ಪದಕ ಗಳಿಸಿದರು.

ಬುಧವಾರ ನಡೆದಿದ್ದ ಕ್ವಾಲಿಫಿಕೇಷನ್‌ ಸುತ್ತಿನಲ್ಲಿ ಹೃದಯ್ ವಿಪುಲ್ ಛೆಡಾ ಅಗ್ರಸ್ಥಾನ ಗಳಿಸಿದ್ದರು. ಆದರೆ ಪದಕ ಸುತ್ತಿನಲ್ಲಿ ಅವರನ್ನು ಕೈಬಿಡಲಾಯಿತು. 

ಡ್ರೆಸಾಜ್ ತಂಡ ವಿಭಾಗದಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ ಛೆಡಾ, ದಿವ್ಯಕೃತಿ ಸಿಂಗ್ ಮತ್ತು ಸುದೀಪ್ತಿ ಹಜೆಲಾ ಅವರೊಂದಿಗೆ ಅನುಷ್ ಕೂಡ ಬಳಗದಲ್ಲಿದ್ದರು.

ಕಂಚಿನ ಪದಕದೊಂದಿಗೆ ಅನುಷ್ ಅಗರವಾಲ್  –ಪಿಟಿಐ ಚಿತ್ರ
ಕಂಚಿನ ಪದಕದೊಂದಿಗೆ ಅನುಷ್ ಅಗರವಾಲ್  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT