ಸೋಮವಾರ, ಜೂಲೈ 6, 2020
28 °C

ಬೀದಿಯಲ್ಲೇ ಸಚಿವ ಈಶ್ವರಪ್ಪ ಕಾಲಿಗೆರಗಿದ ತಹಶೀಲ್ದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಾರ್ವಜನಿಕರಿಗೆ ಆಹಾರ ಪಾದಾರ್ಥಗಳ ಕಿಟ್‌ ಹಂಚಲು ಶುಕ್ರವಾರ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಾಲಿಗೆ ತಹಶೀಲ್ದಾರ್ ನಾಗರಾಜ್ ಅವರು ಬೀದಿಯಲ್ಲೇ ನಮಸ್ಕರಿಸಿದರು.

ದಾವಣಗೆರೆ ಜಿಲ್ಲೆ ಚನ್ನಗಿರಿಯಿಂದ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಬಂದಿರುವ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದರು. ಕೆ.ಆರ್.ಪುರ ರಸ್ತೆಯಲ್ಲಿ ಓಂ ಶಕ್ತಿ ಭಕ್ತರಿಗೆ ಹಮ್ಮಿಕೊಂಡಿದ್ದ ಕಿಟ್‌ ವಿತರಣಾ ಕಾರ್ಯಕ್ರಮಕ್ಕೆ ಸಚಿವರು ಬಂದಾಗ, ಪರಿಚಯ ಮಾಡಿಕೊಂಡು ಕಾಲಿಗೆರಗಿದರು. 

ತಹಶೀಲ್ದಾರ್ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದೆ. ಇಂಥವರಿಂದ ಪಕ್ಷಾತೀತ ಆಡಳಿತ ಸಾಧ್ಯವೇ? ಇವರು ಕೆಈಎಸ್ (ಕೇವಲ ಈಶ್ವರಪ್ಪ ಸೇವೆ) ಅಧಿಕಾರಿ, ‘ಈಶ ಸೇವೆಯೇ ದೇಶ ಸೇವೆ’ ಎಂದುಕೊಂಡ ಅಧಿಕಾರಿ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು