ಮಂಗಳವಾರ, ಮೇ 11, 2021
26 °C

ಹುಲಿ ದಾಳಿಗೆ ಬಾಲಕ ಬಲಿ: ದಕ್ಷಿಣ ಕೊಡಗಿನಲ್ಲಿ ಹೆಚ್ಚಿದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊನ್ನಂಪೇಟೆ (ಕೊಡಗು): ಸಮೀಪದ ಕುಮಟೂರು ಗ್ರಾಮದ ಪಣಿ ಯರವರ ಅಯ್ಯಪ್ಪ ಎಂಬ ಬಾಲಕ (14), ಶನಿವಾರ ರಾತ್ರಿ ಹುಲಿ ದಾಳಿಗೆ ಬಲಿಯಾಗಿದ್ದಾನೆ.

ಗ್ರಾಮದ ಕೋಟ್ರಂಗಡ ಬಿದ್ದಪ್ಪ ಅವರ ಲೈನ್‌ಮನೆಯಲ್ಲಿ, ತಂದೆ ಪಣಿ ಯರವರ ಬಸವ ಅವರೊಂದಿಗೆ ವಾಸವಾಗಿದ್ದ ಅಯ್ಯಪ್ಪ, ಶ್ರೀಮಂಗಲದ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ. ಸೌದೆ ತರಲೆಂದು ಹೋಗಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಕೊಟ್ರಂಗಡ ಅಶ್ವಥ್‌ ಅವರ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ. ಹುಲಿಯ ಕೂದಲು ಮೃತದೇಹದ ಮೇಲೆ ಬಿದ್ದಿದ್ದಾಗಿ ಎಂದು ಸ್ಥಳೀಯರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು