ಚಿಕ್ಕನಾಯಕನಹಳ್ಳಿ: ಸಾಹಿತ್ಯ, ಸಂಘಟನಾ ಚಟುವಟಿಕೆಗಳ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಾಲ್ಲೂಕಿನ ಕೀರ್ತಿಯನ್ನು ಎತ್ತಿಹಿಡಿದ ಮೇರುಚೇತನ ಸಾ.ಶಿ.ಮರುಳಯ್ಯ ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಬಣ್ಣಿಸಿದರು.

ಇಲ್ಲಿನ ನೆಹರು ವೃತ್ತದಲ್ಲಿ ಶುಕ್ರವಾರ ಸಾಹಿತಿ ಸಾ.ಶಿ.ಮರುಳಯ್ಯ ಶ್ರದ್ಧಾಂಜಲಿ ಸಭೆಯಲ್ಲಿ ಮಾತಾನಾಡಿ, ಒಬ್ಬ ಶ್ರೇಷ್ಠ ಕವಿ, ಸಾಹಿತಿಯನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದರು.

ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಗ್ರಾಮದಲ್ಲಿ 1931ರಲ್ಲಿ ಜನಿಸಿದ ಇವರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಕವಿತೆ, ಕತೆ, ಪ್ರಬಂಧ, ಸಂಶೋಧನಾ ಗ್ರಂಥ ಹಾಗೂ ಅನುವಾದದಲ್ಲಿ ಸಿದ್ಧಹಸ್ತರಾಗಿದ್ದರು. 95ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಸಾ.ಶಿ.ಮರುಳಯ್ಯ ಅವರದು ಇಡೀ ತಾಲ್ಲೂಕು ಹೆಮ್ಮೆ ಪಡುವಂತಹ ವ್ಯಕ್ತಿತ್ವ. ಕಳೆದ ವರ್ಷ ಜನವರಿಯಲ್ಲಿ ಅವರ ಜನ್ಮದಿನದಂದು ಶೆಟ್ಟಿಕೆರೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ನೆನಪಿಸಿಕೊಂಡರು.

ಲೇಖಕ ಸಿ.ಗುರುಮೂರ್ತಿಕೊಟಿಗೆಮನೆ ಮಾತನಾಡಿ, ಸಾ.ಶಿ.ಮರುಳಯ್ಯ ಅಮೆರಿಕ, ಶ್ರೀಲಂಕಾದಲ್ಲಿ ಸಂಚರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ವಿಸ್ತರಿಸುವಂತಹ ಕೆಲಸ ಮಾಡಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯುವವರಿಗೆ ತರಬೇತಿ ಪ್ರಾರಂಭಿಸಿದ ಮೊದಲಿಗರು. ರಾಜ್ಯಲೋಕ ಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗೂ ತರಬೇತಿ ನೀಡುತ್ತಿದ್ದರು. ಹುಟ್ಟೂರು ಸಾಸಲಿನಲ್ಲಿ ‘ತವರೂರ ಬಾಗಿನ’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದರು ಎಂದು ನೆನಪಿಸಿಕೊಂಡರು.

ಪುರಸಭೆ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಜಿಎಸ್ಎಸ್ ವೈದ್ಯಕೀಯ ಮಹಾವಿಶ್ವವಿದ್ಯಾನಿಲಯಕ್ಕೆ ತಮ್ಮ ದೇಹವನ್ನು ದಾನ ಮಾಡುವ ಮೂಲಕ ಮರುಳಯ್ಯ ಸಾವಿನಲ್ಲೂ ಮೇರು ವ್ಯಕ್ತಿತ್ವ ಮೆರೆದಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷೆ ಪ್ರೇಮಾ, ಸದಸ್ಯ ಎಚ್.ಬಿ.ಪ್ರಕಾಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿದರು.

ಕುಂಚಾಕುಂಕರ ಕಲಾಸಂಘದ ಅಧ್ಯಕ್ಷ ಸಿ.ಎಚ್.ಗಂಗಾಧರ್, ತಾಲ್ಲೂಕು ಕಸಾಪ ಕಾರ್ಯದರ್ಶಿ ಮಂಜುನಾಥ್ರಾಜ್ ಅರಸ್, ವಿ.ಆರ್.ಮೇರುನಾಥ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂರ್ತಿ, ಸವಿತಾ ಸಮಾಜದ ಅಧ್ಯಕ್ಷ ಸುಪ್ರೀಂ ಸುಬ್ರಹ್ಮಣ್ಯ, ಡಿವಿಪಿ ಶಾಲಾ ಕಾರ್ಯದರ್ಶಿ ಸಿ.ಎಸ್.ನಟರಾಜು, ಎಚ್.ಬಿ.ಕುಮಾರ್, ಶ್ರೀನಿವಾಸಮೂರ್ತಿ, ಕೆ.ಜಿ.ಕೃಷ್ಣೇಗೌಡ, ರವಿಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.