ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಟಿವಿಎಸ್ ಸೇರಿ 14 ಶಾಲೆ ಅನಧಿಕೃತ

Published 5 ಮೇ 2024, 6:03 IST
Last Updated 5 ಮೇ 2024, 6:03 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಮಾನ್ಯತೆ ನವೀಕರಣ, ಶಾಲೆ ಸ್ಥಳಾಂತರಕ್ಕೆ ಅನುಮತಿ ಪಡೆಯದ, ಒಂದೇ ಕಾಂಪೌಂಡ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆಯದ 14 ಖಾಸಗಿ ಶಾಲೆಗಳನ್ನು ಅನಧಿಕೃತ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷಿಸಿದೆ.

ಶಾಲೆಗಳ ವಿವರ: ನಗರದ ರಿಂಗ್‌ ರಸ್ತೆಯ ಅಕ್ಸ ಉರ್ದು ಹಿರಿಯ ಪ್ರಾಥಮಿಕ ಶಾಲೆ, ರೀಡ್‌ ಪಬ್ಲಿಕ್‌ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಚಿಕ್ಕಪೇಟೆಯ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ವಾಸವಿ ವಿದ್ಯಾಪೀಠ, ಎಸ್‌ಐಟಿ ಬಡಾವಣೆಯ ವಾಸವಿ ವಿದ್ಯಾಪೀಠ (ಪ್ರಾಥಮಿಕ ಶಾಲೆ), ಸದಾಶಿವ ನಗರದ ಫ್ಲೋರಾ ಹಿರಿಯ ಪ್ರಾಥಮಿಕ ಶಾಲೆ, ವಿನೋಬ ನಗರದ ಎಂಇಎಸ್‌ ಕಿರಿಯ ಪ್ರಾಥಮಿಕ ಶಾಲೆ, ನ್ಯಾಷನಲ್‌ ಆಂಗ್ಲ ಪ್ರಾಥಮಿಕ ಶಾಲೆ, ಬನಶಂಕರಿಯ ಎಸ್‌.ಆರ್‌.ವಿದ್ಯಾಕೇಂದ್ರ, ತಾಲ್ಲೂಕಿನ ಮಾನಕಹಳ್ಳಿಯ ಉಮಾಮಹೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಕೆಸರುಮಡು ಹೋಲಿಸೆಂಟ್‌ ಹಿರಿಯ ಪ್ರಾಥಮಿಕ ಶಾಲೆ, ನಾಗವಲ್ಲಿಯ ಡಾ.ರಾಧಾಕೃಷ್ಣ ಪಬ್ಲಿಕ್‌ ಶಾಲೆಗಳನ್ನು ಅನಧಿಕೃತ ಎಂದು ಘೋಷಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಲಾ ತಿಳಿಸಿದ್ದಾರೆ.

ಇಲಾಖೆಯ ಅನುಮತಿ ಪಡೆಯದೆ ಪಂಡಿತನಹಳ್ಳಿಗೆ ಸ್ಥಳಾಂತರಗೊಂಡಿರುವ ಎಚ್‌ಎಂಟಿ ಮುಖ್ಯದ್ವಾರದ ಎದುರುಗಡೆ ಇದ್ದ ಟಿವಿಎಸ್‌ ಶಾಲೆ, ಅನುಮತಿ ಪಡೆಯದೆ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ತಾಲ್ಲೂಕಿನ ಚನ್ನೇನಹಳ್ಳಿಯ ಕಿಡ್ಸ್‌ ಇಂಟರ್‌ ನ್ಯಾಷನಲ್‌ ಪ್ರೌಢಶಾಲೆ ಸೇರಿ ಒಟ್ಟು 14 ಅನಧಿಕೃತ ಶಾಲೆ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT