ಶಿರಾ: ಬುಕ್ಕಾಪಟ್ಟಣ ವಲಯದ ಚಿಂಕಾರ ವನ್ಯಜೀವಿಧಾಮದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 18 ಮಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಧುಗಿರಿ ತಾಲ್ಲೂಕಿನ ತಿಪ್ಪನಹಳ್ಳಿ, ಬಡವನಹಳ್ಳಿ, ಶಿರಾ ತಾಲ್ಲೂಕಿನ ಕಳ್ಳಿಪಾಳ್ಯ ಹಾಗೂ ತುಮಕೂರು ತಾಲ್ಲೂಕಿನ ಕೆಂಚಯ್ಯನಪಾಳ್ಯ ಗ್ರಾಮಕ್ಕೆ ಸೇರಿದ 18 ಮಂದಿ ಬೇಟೆಯಾಡಲು ತಂದಿದ್ದ ವಾಹನ, ಬಲೆ, ಮರದ ದೊಣ್ಣೆ, ಭರ್ಜಿಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೆಲವು ದಿನಗಳಿಂದ ಬೇಟೆಗಾರರ ಚಟುವಟಿಕೆ ಹೆಚ್ಚಾಗಿತ್ತು. ಇದರ ಮಾಹಿತಿ ಪಡೆದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ವಲಯ ಅರಣ್ಯಾಧಿಕಾರಿ ಚಂದನ್ ಕುಮಾರ್ ಮಾರ್ಗದರ್ಶನದಲ್ಲಿ ಉಪ ವಲಯಾಧಿಕಾರಿ ಕಿರಣ್ ನೇತೃತ್ವದ ತಂಡದಲ್ಲಿ ರೇವಣಸಿದ್ಧಪ್ಪ ಕಾಳಗಿ, ಪರಶುರಾಮ, ನವೀನ್ ಕುಮಾರ್, ಪುಟ್ಟಸ್ವಾಮಿ, ಗುರುವಯ್ಯ, ನಾಗರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.