ಶುಕ್ರವಾರ, ಆಗಸ್ಟ್ 19, 2022
27 °C

ತುಮಕೂರು: ವಿಷಪೂರಿತ ನೀರು ಕುಡಿದು 22 ಕುರಿಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋರ(ತುಮಕೂರು): ತುಮಕೂರು ತಾಲ್ಲೂಕು ಕೋರ ಹೋಬಳಿ ವಸಂತನರಸಾಪುರ ಕೈಗಾರಿಕಾ ಪ್ರದೇಶ ಒಂದನೇ ಹಂತದಲ್ಲಿ ಭಾನುವಾರ ವಿಷಪೂರಿತ ನೀರು ಕುಡಿದು 22 ಕುರಿಗಳು ಮೃತಪಟ್ಟಿವೆ.

ತರೂರು ಹಾಗೂ ಚಿಕ್ಕದಾಸರಹಳ್ಳಿ ಗೊಲ್ಲರಹಟ್ಟಿಯ ವಲಸೆ ಕುರಿಗಾಹಿಗಳು ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ರೈತರ ಜಮೀನಿನಲ್ಲಿ ಮಂದೆ ಹಾಕಿ ಕುರಿ ಮೇಯಿಸುತ್ತಿದ್ದರು. ಭಾನುವಾರ ಕೈಗಾರಿಕಾ ಪ್ರದೇಶದ ಅಕ್ಕಪಕ್ಕ ಕುರಿಗಾಹಿಗಳು ಕುರಿ ಮೇಯಿಸುತ್ತಿದ್ದರು. ಈ ವೇಳೆ ಫುಡ್ ಪಾರ್ಕ್ ಸಮೀಪದಲ್ಲಿ ರೂಪಿಂಗ್, ಕೆಮಿಕಲ್ ಹಾಗೂ ಇತರೆ ಕಾರ್ಖಾನೆಗಳಿಂದ ಬಿಡುಗಡೆಯಾದ ವಿಷಪೂರಿತ ನೀರು ಹಾಗೂ ತ್ಯಾಜ್ಯ ಸೇವಿಸಿ ಘಟನೆ ಸಂಭವಿಸಿದೆ.

ಭಾನುವಾರ 22 ಕುರಿಗಳು ಮೃತಪಟ್ಟಿದ್ದು, ಹಲವು ಕುರಿಗಳು ಅನಾರೋಗ್ಯಕ್ಕೀಡಾಗಿವೆ. ಹಾಗಾಗಿ ಮತ್ತಷ್ಟು ಕುರಿಗಳು ಸಾವನ್ನಪ್ಪುವ ಆತಂಕವನ್ನು ಕುರಿಗಾಹಿಗಳು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಕೋರ ಠಾಣೆ ಪೊಲೀಸರು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು