ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 6 ಸಾವು

Last Updated 26 ಏಪ್ರಿಲ್ 2021, 6:11 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್‌–19ನಿಂದ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ಮಹಿಳೆಯರು
ಸೇರಿದ್ದಾರೆ. ಇತ್ತೀಚಿನ ಅಂಕಿ ಅಂಶಗಳನ್ನು ಗಮನಿಸಿದರೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.

ನಗರದ ಬಾರ್‌ಲೈನ್ ರಸ್ತೆಯ 45 ವರ್ಷದ ಮಹಿಳೆ ಶ್ರೀದೇವಿ ಆಸ್ಪತ್ರೆಯಲ್ಲಿ, ತುಮಕೂರು ತಾಲ್ಲೂಕು ಹನುಮಂತನಗರ ಗ್ರಾಮದ 65 ವರ್ಷದ ವೃದ್ಧೆ ನಗರದ ಪೃಥ್ವಿ ಆಸ್ಪತ್ರೆಯಲ್ಲಿ, ಗುಬ್ಬಿ ತಾಲ್ಲೂಕು ಕಚ್ಚೇನಹಳ್ಳಿ ಗ್ರಾಮದ 45 ವರ್ಷದ ಪುರುಷ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕುಣಿಗಲ್ ತಾಲ್ಲೂಕು ಹಳೆವೂರು ಗ್ರಾಮದ 70 ವರ್ಷದ ವೃದ್ಧೆ ಜಿಲ್ಲಾ ಆಸ್ಪತ್ರೆಯಲ್ಲಿ, ಪಾವಗಡ ತಾಲ್ಲೂಕು ದೊಡ್ಡಹಳ್ಳಿ ಗ್ರಾಮದ 33 ವರ್ಷದ ಪುರುಷ ಅಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ, ಮಧುಗಿರಿ ತಾಲ್ಲೂಕು ಕೊಂಡವಾಡಿ ಗ್ರಾಮದ 60 ವರ್ಷದ ಮಹಿಳೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ತಾಲ್ಲೂಕುವಾರು ಸೋಂಕಿತರ ವಿವರ: ತುಮಕೂರು ತಾಲ್ಲೂಕು 383, ಪಾವಗಡ 97, ಕುಣಿಗಲ್ 93, ಶಿರಾ 72, ಮಧುಗಿರಿ 71, ಗುಬ್ಬಿ 55, ಚಿಕ್ಕನಾಯಕನಹಳ್ಳಿ 54, ತುರುವೇಕೆರೆ 54, ಕೊರಟಗೆರೆ 49, ತಿಪಟೂರು 34 ಮಂದಿಗೆ ಸೋಂಕು ದೃಢಪಟ್ಟಿದೆ.

ವೈ.ಎನ್.ಹೊಸಕೋಟೆ: ಗ್ರಾಮದಲ್ಲಿ ಕೋವಿಡ್‌ಗೆ ಭಾನುವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ.

ಹೊಸ ಚೌಡೇಶ್ವರಿ ದೇವಸ್ಥಾನದ ಹಿಂಭಾಗ ಪ್ರದೇಶದಲ್ಲಿ 62 ವರ್ಷದ ವ್ಯಕ್ತಿ ಕೋವಿಡ್ ಸೋಂಕಿನಿಂದಾಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶನಿವಾರದಂದು ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು.

ಶಿರಾದಲ್ಲಿ ಮೂವರು ಸಾವು: ತಾಲ್ಲೂಕಿನಲ್ಲಿ ಭಾನುವಾರ 3 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಬರಗೂರು, ರಂಗನಹಳ್ಳಿ, ಗುಡದಹಟ್ಟಿಯ ಕೊರೊನಾ ಸೊಂಕಿತರು ಭಾನುವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಭಾನುವಾರ 72 ಹೊಸ ಪ್ರಕರಣಗಳು ದೃಢಪಟ್ಟಿವೆ.

ಕಳೆದ ಆರು ದಿನಗಳಲ್ಲಿ 624 ಮಂದಿಗೆ ಸೊಂಕು ಕಾಣಿಸಿಕೊಂಡಿದೆ ಅದೇ ರೀತಿ ಕಳೆದ ನಾಲ್ಕು ದಿನದಲ್ಲ ನಾಲ್ಲು ಮಂದಿ ಮೃತ ಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT