ಮಂಗಳವಾರ, ಡಿಸೆಂಬರ್ 1, 2020
18 °C

ತುಮಕೂರಿನ ಹೋಂಡಾ ಶೋ ರೂಂನಲ್ಲಿ ಬೆಂಕಿ: 65ಕ್ಕೂ ಹೆಚ್ಚು ಬೈಕ್‌ಗಳು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದ ಬಿ.ಎಚ್.ರಸ್ತೆಯ ಸೆಂಚುರಿ ಹೋಂಡಾ ಶೋ ರೂಂನಲ್ಲಿ ಶನಿವಾರ ನಡುರಾತ್ರಿ ಬೆಂಕಿ ಅನಾಹುತ ಸಂಭವಿಸಿದೆ. 65ಕ್ಕೂ ಹೆಚ್ಚು ಬೈಕ್‌ಗಳು ಭಸ್ಮವಾಗಿವೆ. 15 ಕಂಪ್ಯೂಟರ್‌ಗಳು, ಪೀಠೋಪಕರಣಗಳು ಆಹುತಿ ಆಗಿವೆ.

ಪ್ರತಿ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಪೂಜೆ ನಡೆಸುತ್ತೇವೆ. ರಾತ್ರಿ 10 ರವರೆಗೂ ಪೂಜೆ ನಡೆಸಿದ್ದೆವು. ನಂತರ ದೀಪಗಳನ್ನು ಮನೆಗೆ ತೆಗೆದುಕೊಂಡು ಹೋದೆವು. ಅವಘಡಕ್ಕೆ ನಿಖರ ಕಾರಣ ಗೊತ್ತಿಲ್ಲ ಎಂದು ಶೋ ರೂಂ‌ ಮಾಲೀಕ ಪ್ರವೀಣ್ 'ಪ್ರಜಾವಾಣಿ'ಗೆ ತಿಳಿಸಿದರು.

ದುರ್ಘಟನೆಯಿಂದ ಎರಡೂವರೆ ಕೋಟಿ ನಷ್ಟ ಸಂಭವಿಸಿದೆ ಎಂದು ಪ್ರವೀಣ್‌ ಹೇಳಿದರು.

ರಾತ್ರಿಯೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಬೈಕ್‌ಗಳು ಪೂರ್ಣವಾಗಿ ಭಸ್ಮವಾಗಿವೆ. ಸಮೀಪದಲ್ಲಿಯೇ ಪಟಾಕಿ ಅಂಗಡಿಗಳು ಸಹ ಇದ್ದವು.


ಬೆಂಕಿಯಿಂದ ಸುಟ್ಟು ಕರಕಲಾಗಿರುವ ಅವಶೇಷಗಳು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು