ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಡಕೇಗುಡ್ಲು: ಬೋನಿಗೆ ಬಿದ್ದ ಚಿರತೆ

Published 21 ಮೇ 2024, 13:41 IST
Last Updated 21 ಮೇ 2024, 13:41 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿಯ ಬಡಕೇಗುಡ್ಲು ಗ್ರಾಮದ ಬಳಿಯ ಗೊಲ್ಲರಹಟ್ಟಿ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೋಮವಾರ ತಡರಾತ್ರಿ ನಾಲ್ಕು ವರ್ಷದ ಹೆಣ್ಣು ಚಿರತೆ ಬಿದ್ದಿದೆ.

ಬಡಕೇಗುಡ್ಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ 20 ದಿನಗಳಿಂದ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ಹಾಗಾಗಿ ಅರಣ್ಯ ಇಲಾಖೆಯಿಂದ ಐದು ದಿನದ ಹಿಂದೆ ಬೋನು ಇಡಲಾಗಿತ್ತು.

ಚಿರತೆಯನ್ನು ತಪಾಸಣೆ ನಡೆಸಿದ ಹುಳಿಯಾರು ಪಶು ಆಸ್ಪತ್ರೆ ಡಾ.ಮಂಜುನಾಥ್‌ ಚಿರತೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

ಬುಕ್ಕಾಪಟ್ಟಣ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಎಸ್.ಎಸ್.ಸಿದ್ದರಾಜು, ಉಪ ವಲಯ ಅರಣ್ಯಾಧಿಕಾರಿ ಟಿ.ಕಿರಣ್‌, ಅರಣ್ಯ ರಕ್ಷಕ ರೇವಣಸಿದ್ದಪ್ಪ ಕಳಗಿ, ವಾಚರ್‌ ನಾಗರಾಜು, ವಾಹನ ಚಾಲಕ ಹರೀಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT