ಭಾನುವಾರ, ಜನವರಿ 19, 2020
19 °C

ಪತ್ನಿಯ ಶೀಲ ಶಂಕಿಸಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ತಾಲ್ಲೂಕಿನ ಚನ್ನಾಪುರದಲ್ಲಿ ಪತ್ನಿಯ ಶೀಲ ಶಂಕಿಸಿದ ಪತಿ ನಾಗರಾಜ ಕೋಲಿನಿಂದ ಬಡಿದು ಬುಧವಾರ ರಾತ್ರಿ ಹತ್ಯೆ ಮಾಡಿದ್ದಾನೆ.

ಪತ್ನಿ ಪವಿತ್ರಾ (38) ಕೊಲೆಯಾದ ಗೃಹಿಣಿ. 25 ವರ್ಷದ ಹಿಂದೆ ಮದುವೆಯಾದ ದಂಪತಿಗೆ ಪುತ್ರ, ಪುತ್ರಿ ಇದ್ದಾರೆ. 

‘ಆರು ವರ್ಷಗಳಿಂದಲೂ ಇಬ್ಬರ ನಡುವೆ ವೈಮನಸ್ಯ ಉಂಟಾಗಿತ್ತು. ಹಲವಾರು ಬಾರಿ ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿಸಂಧಾನ ನಡೆದಿದ್ದವು’ ಎಂದು ಪವಿತ್ರಾ ತಂದೆ ಗಂಗಾಧರಯ್ಯ ತಿಳಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲು ದೂರು ದಾಖಲಿಸಿದ್ದಾರೆ.

ಘಟನೆ ಸಮಯದಲ್ಲಿ ಮಗ ಮಂಜುನಾಥ್ ತಂದೆಯ ವರ್ತನೆಗೆ ಬೆದರಿ ಪಕ್ಕದ ಮನೆಗೆ ಓಡಿಹೋಗಿದ್ದಾನೆ. ಪೊಲೀಸರು ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು