ಗುರುವಾರ , ನವೆಂಬರ್ 26, 2020
20 °C
ಕೊಳೆಗೇರಿ ನಿರ್ಮೂಲನಾ ಮಂಡಳಿ ಕಾರ್ಯದರ್ಶಿ

ಬಿಡಿಎ ಉಪ ಕಾರ್ಯದರ್ಶಿಯಾಗಿದ್ದ ನಿರಂಜನ್ ಬಾಬು ತುಮಕೂರು ಮನೆ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಬೆಂಗಳೂರಿನ ಕೊಳೆಗೇರಿ ನಿರ್ಮೂಲನಾ ಮಂಡಳಿ ಕಾರ್ಯದರ್ಶಿ ಎಂ.ಎಸ್.ನಿರಂಜನ್ ಬಾಬು ಅವರಿಗೆ ಸೇರಿದ ತುಮಕೂರಿನ ನಿವಾಸದ ಮೇಲೆ ಬೆಂಗಳೂರಿನ ಎಸಿಬಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.

ನಿರಂಜನ್ ಬಾಬು ಈ ಹಿಂದೆ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿಯಾಗಿದ್ದರು.

ತುಮಕೂರಿನ ಶೆಟ್ಟಿಹಳ್ಳಿ ಮತ್ತು ಮಾರುತಿ ನಗರದ ಅವರ ನಿವಾಸ ‘ಅಮೃತ ವರ್ಷಿಣಿ’ಯಲ್ಲಿ ಶೋಧ ನಡೆಸಿದ ಅಧಿಕಾರಿಗಳು ಕಂಪ್ಯೂಟರ್, ಪ್ರಿಂಟರ್, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ನಿರಂಜನ್ ಬಾಬು ಅವರ ಸ್ನೇಹಿತರು ವಾಸಿಸುತ್ತಿರುವ ಬೆಂಗಳೂರಿನ ಯಶವಂತಪುರದ ಅಪಾರ್ಟ್‌ಮೆಂಟ್ ಒಂದರ ಫ್ಲಾಟ್‌ನಲ್ಲಿಯೂ ಪರಿಶೀಲನೆ ನಡೆಸಿದ್ದಾರೆ.

ಡಿವೈಎಸ್‌ಪಿ ತಮ್ಮಯ್ಯ, ಇನ್‌ಸ್ಪೆಕ್ಟರ್ ವಿಜಯಲಕ್ಷ್ಮಿ, ಮಾಲತೇಶ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ದಾಳಿ ನಡೆಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು