ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮಕ್ಕಳ ಅಪೌಷ್ಟಿಕತೆ ನಿಯಂತ್ರಣಕ್ಕೆ ಕ್ರಮ

ಶಿಶು ಕಲ್ಯಾಣ ಇಲಾಖೆಗೆ ಸವಾಲಾಗಿದೆ ಸಂಪೂರ್ಣ ಕಡಿವಾಣ
Last Updated 6 ಜನವರಿ 2021, 4:51 IST
ಅಕ್ಷರ ಗಾತ್ರ

ತುರುವೇಕೆರೆ: ಅಪೌಷ್ಟಿಕ ಮಕ್ಕಳ ಸಂಖ್ಯೆಯನ್ನು ಸಂಪೂರ್ಣ ತಹಬದಿಗೆತರುವುದು ತಾಲ್ಲೂಕು ಶಿಶು ಕಲ್ಯಾಣ ಇಲಾಖೆಗೆ ಸವಾಲಾಗಿದೆ.

ದಶಕದಹಿಂದೆ ಸುಮಾರು 100ಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳು ತಾಲ್ಲೂಕಿನಲ್ಲಿದ್ದರು.ಪ್ರಸಕ್ತ ಸಾಲಿನಡಿ 11 ಮಕ್ಕಳಿಗೆ ಇಳಿಕೆ ಕಂಡಿದೆಯಾದರೂ ಸಂಪೂರ್ಣ ನಿಯಂತ್ರಣವಾಗಿಲ್ಲ. ಕಳೆದ ಐದು ವರ್ಷದ ಅವಧಿಯಲ್ಲಿನ ಅಪೌಷ್ಟಿಕಮಕ್ಕಳ ಅಂಕಿ–ಅಂಶವನ್ನು ಕೂಲಂಕಷವಾಗಿ ಅವಲೋಕಿಸಿದರೆ 90 ಮಕ್ಕಳಲ್ಲಿ 57 ಹೆಣ್ಣುಮಕ್ಕಳೇ ಇದ್ದಾರೆ. ಇದು ಹೆಣ್ಣುಮಕ್ಕಳ ಆರೋಗ್ಯ ಸಂಬಂಧ ಸಮಾಜ ತೋರುವ ನಿರಾಸಕ್ತಿ ಮತ್ತು ಅಸಡ್ಡೆಯ ದ್ಯೋತಕವಾಗಿದೆ.

ಮಗು ಹುಟ್ಟಿದ ದಿನದಿಂದ6 ವರ್ಷಗಳ ತನಕ ಯಾವ ಮಗು ನಿರ್ದಿಷ್ಟ ವಯಸ್ಸಿಗೆ ತಕ್ಕಂತೆ ಎತ್ತರ, ತೂಕ ಹಾಗೂ ಬೆಳವಣಿಗೆಯಲ್ಲಿ ಸಮಪ್ರಮಾಣ ಹೊಂದಿಲ್ಲದಿದ್ದರೆ ಶಿಶು ಕಲ್ಯಾಣ ಇಲಾಖೆಯ ಸಿಬ್ಬಂದಿ ಅಂತಹ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಾರೆ. ಜೊತೆಗೆ ಅಂಗನವಾಡಿ ಕೇಂದ್ರಗಳಿಗೆ ಬರುವ ಪ್ರತಿ ಮಗುವಿನತೂಕ, ಬೆಳವಣಿಗೆ ಪರೀಕ್ಷಿಸಲಾಗುತ್ತದೆ. ಈ ವೇಳೆ ಮಗುವಿನಲ್ಲಿ ಶಾರೀರಿಕವಾಗಿ ಹೆಚ್ಚಿನ ವ್ಯತ್ಯಾಸ ಕಂಡುಬಂದರೆ ಆ ಮಗುವನ್ನು ಅಪೌಷ್ಟಿಕತೆಯ ಮಕ್ಕಳ ಪಟ್ಟಿಗೆ ಸೇರಿಸುತ್ತಾರೆ.

ಕೆಲವು ಕುಟುಂಬಗಳಲ್ಲಿನ ಹಸಿವು, ಬಡತನ, ಹೆಚ್ಚು ಮಕ್ಕಳ ಪಡೆಯುವುದರಿಂದ ಎಲ್ಲ ಮಕ್ಕಳಿಗೂ ಸಮನಾಗಿ ಆಹಾರ ನೀಡಲುಸಾಧ್ಯವಾಗುವುದಿಲ್ಲ. ಎರಡು ಮಕ್ಕಳನಡುವಿನ ಅಂತರ ಕಾಯ್ದುಕೊಳ್ಳ
ದಿರುವುದು, ತಾಯಿಯನ್ನು ಮಗುವಿನಿಂದ ಬೇರ್ಪಡಿಸಿ ಕೂಲಿ ಕೆಲಸಕ್ಕೆ ಹಚ್ಚುವುದು, ತಾಯಿಯೇ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಮಕ್ಕಳ ಅಪೌಷ್ಟಿಕತೆಗೆ ಕಾರಣವಾಗುತ್ತಿದೆ.

ತಾಯಿಯ ಗರ್ಭದಿಂದ ಮಗು ಹೆರಿಗೆಯಾಗುವವರೆಗೂ ಪೌಷ್ಟಿಕ ಆಹಾರ ಸೇವಿಸದಿರುವುದು, ಮಕ್ಕಳು ಸರಿಯಾಗಿ ಆಹಾರ ತೆಗೆದುಕೊಳ್ಳದೆ ರೋಗ ನಿರೋಧಕ ಶಕ್ತಿ ಕುಗ್ಗಿ ಬೇಗ ಕಾಯಿಲೆಗೆ ಒಳಗಾಗುತ್ತಾರೆ. ಎಚ್‍ಐವಿ ಸೋಂಕು ಬಾಧಿತ, ಸುಟ್ಟಗಾಯದ ಮಕ್ಕಳು, ಗಂಭೀರ ಕಾಯಿಲೆಗೆ ತುತ್ತಾದ ಮಕ್ಕಳು, ಕ್ಯಾನ್ಸರ್‌, ಪದೇ ಪದೇ ಬೇಧಿ ಕಾಣಿಸಿಕೊಳ್ಳುವ ಮಕ್ಕಳು ಅಪೌಷ್ಟಿಕತೆಗೆತುತ್ತಾಗುತ್ತಾರೆ.

‘ಹುಟ್ಟಿದ ಆರು ತಿಂಗಳು ತುಂಬವವರೆಗೆ ತಾಯಿಯ ಎದೆ ಹಾಲು ಕುಡಿಸಬೇಕೆ ವಿನಾ ಬೇರೆ ಯಾವುದನ್ನೂ ಕೊಡಬಾರದು. ಈ ಅವಧಿಯ ಎರಡು ವರ್ಷದೊಳಗೆ ಮಗುವಿನ ಮಿದುಳು ಶೇಕಡ 90ರಷ್ಟು ಬೆಳವಣಿಗೆಯಾಗುತ್ತದೆ’ ಎನ್ನುತ್ತಾರೆ ಮಕ್ಕಳ ತಜ್ಞೆ ಡಾ.ಬಿ.ವಿ. ಸುಜಾತಾ.

ಶಿಶು ಕೇಂದ್ರಗಳಲ್ಲಿ ಅಪೌಷ್ಟಿಕ ಮಗುವಿಗೆ ವಾರದಲ್ಲಿ ದಿನಕ್ಕೆ ಮೊಟ್ಟೆ, ಹಾಲು, ಕಡಲೆ 36 ಗ್ರಾಂ, ಹೆಸರು ಕಾಳು 32 ಗ್ರಾಂ, ಕಡಲೆ ಬೀಜ 24 ಗ್ರಾಂ, ಬೆಲ್ಲ 50 ಗ್ರಾಂ, ಗೋಧಿ ನುಚ್ಚು 120 ಗ್ರಾಂ ಸೇರಿದಂತೆ ಇತರೇ ವಸ್ತುಗಳನ್ನು ಉಳಿದ ಮಕ್ಕಳಿಗೆ ಕೊಡುವ ಆಹಾರಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಪ್ರಮಾಣದಲ್ಲಿವಿತರಣೆ ಮಾಡುತ್ತಾರೆ.

ಹಿಂದೆ ಮಗುವಿನ ಔಷಧಕ್ಕಾಗಿ ಸರ್ಕಾರ ವರ್ಷಕ್ಕೆ ₹ 750 ನೀಡುತ್ತಿತ್ತು.ಈಗ ₹2000ಗೆ ಏರಿಸಿದೆ ಮಗುವಿನ
ತಾಯಿ ಗರ್ಭಿಣಿಯಾಗಿದ್ದಾಗಲೇ ಆರೋಗ್ಯ ವೃದ್ಧಿಗೆ ಉಚಿತ ಮಾತ್ರೆ, ಔಷಧ ಮತ್ತುಆಹಾರವನ್ನು ಶಿಶು ಕೇಂದ್ರಗಳ ಮೂಲಕನೀಡುತ್ತಾ ಬಂದಿದೆ. ಆಯಾ ಅಂಗನವಾಡಿ ಕೇಂದ್ರದ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಿಂಗಳಿಗೊಮ್ಮೆ ಭೇಟಿ ನೀಡಿ ಮಗುವಿನ ಆರೋಗ್ಯ ತಪಾಸಣೆ ಮಾಡುತ್ತಾರೆ. ಇತ್ತೀಚೆಗೆ ಪೋಷಣ್‍ ಅಭಿಯಾನ ಕೂಡ ಮಕ್ಕಳ ಅಪೌಷ್ಟಿಕತೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

‘ಅಪೌಷ್ಟಿಕ ಮಕ್ಕಳಿಗೆಪೌಷ್ಟಿಕ ಆಹಾರ ಪೂರೈಕೆ ಮೂಲಕ ಅವರನ್ನುಆರೋಗ್ಯವಂತರನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ’ ಎನ್ನುತ್ತಾರೆಸಿಡಿಪಿಒ ಬಿ.ಪಿ. ಪುಟ್ಟಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT