ಬಿಸಿಲಿಗೆ ಬಸವಳಿದ ಅನ್ನದಾತರು
ಹುಳಿಯಾರು/ ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಮತ್ತು ಚಿಕ್ಕನಾಯಕನಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ರಾಗಿ ಖರೀದಿಯ ಟೋಕನ್ ಪಡೆಯಲು ಸೋಮವಾರ ಮಧ್ಯಾಹ್ನದವರೆಗೂ ಬಿಸಿಲಿನಲ್ಲಿ ರೈತರು ಕಾದು ನಿಂತಿದ್ದರು.
ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ರಾಗಿ ಖರೀದಿಸಲು ಮತ್ತೆ ಅವಕಾಶ ನೀಡಿದ್ದು ಸೋಮವಾರದಿಂದ ನೋಂದಣಿ ನಡೆಯಲಿದೆ ಎಂದು ಪ್ರಚುರಪಡಿಸಲಾಗಿತ್ತು. ಇದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸರತಿ ಸಾಲಿನಲ್ಲಿ ಕೇಂದ್ರಗಳ ಮುಂದೆ ನಿಂತಿದ್ದರು.
ಆದರೆ, ಖರೀದಿಗೆ ನೋಂದಣಿ ಮಾಡಿಕೊಂಡು ಟೋಕನ್ ಕೊಡದೆ ಇದ್ದಾಗ ರೈತರ ತಾಳ್ಮೆಯ ಕಟ್ಟೆಯೊಡೆದಿತ್ತು. ರೈತರ ಗಲಾಟೆ ಜೋರಾದಾಗ ಸಂಬಂಧಪಟ್ಟ ಅಧಿಕಾರಿಗಳು ಸಮಜಾಯಿಸಿ ನೀಡಲು ಮುಂದಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.