ತುಮಕೂರು: ‘ರಂಗಭೂಮಿಯ ತವರೂರು’ ಎಂದು ಕರೆಸಿಕೊಳ್ಳುವ ಜಿಲ್ಲೆಯಲ್ಲಿ ಹಿರಿಯ ಕಲಾವಿದರ ಸ್ಥಿತಿ ಯಾರಿಗೂ ಬೇಡವಾಗಿದೆ. ನೂರಾರು ಜನ ಕಲಾವಿದರು ಸರ್ಕಾರದ ನೆರವಿಗಾಗಿ ಕಾಯುತ್ತಿದ್ದಾರೆ.

ಕಲಾವಿದರಿಗೆ ಎರಡು ತಿಂಗಳಿನಿಂದ ಮಾಸಾಶನ ಪಾವತಿಯಾಗಿಲ್ಲ. ಮತ್ತೊಂದು ಕಡೆ ಮಾಸಾಶನ ಕೋರಿ ಅರ್ಜಿ ಸಲ್ಲಿಸಿ ನಾಲ್ಕು ವರ್ಷ ಕಳೆದರೂ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ 416 ಮಂದಿ ಕಲಾವಿದರಿಗೆ ಮಾಹೆಯಾನ ₹2,500, 56 ಜನ ಕಲಾವಿದರ ಪತ್ನಿಯರಿಗೆ ತಿಂಗಳಿಗೆ ₹500 ವಿಧವಾ ಮಾಸಾಶನ ನೀಡಲಾಗುತ್ತಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಹಣ ಬಂದಿದ್ದೇ ಕೊನೆ.

ಕಲಾವಿದರು ಈ ಹಿಂದೆ ₹2 ಸಾವಿರ ಮಾಸಾಶನ ಪಡೆಯುತ್ತಿದ್ದರು. ಸರ್ಕಾರ ಈ ವರ್ಷದ ಬಜೆಟ್ನಲ್ಲಿ ₹2,500ಕ್ಕೆ ಹೆಚ್ಚಿಸಿದೆ. ಮಾಸಾಶನ ಹೆಚ್ಚಳವಾದ ನಂತರ ಇದುವರೆಗೆ ಕಲಾವಿದರ ಕೈಗೆ ಹಣ ತಲುಪಿಲ್ಲ. ಏಪ್ರಿಲ್, ಮೇ ತಿಂಗಳ ಹಣಕ್ಕಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೂನ್ ತಿಂಗಳ ಮೊದಲ ವಾರ ಕಳೆದರೂ ಹಣ ಬಂದಿಲ್ಲ.

‘ಕಲಾವಿದರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ಕೆಲಸ ಮಾಡಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇವಲ ‘ಜಯಂತಿ ಆಚರಣೆಗೆ’ ಸೀಮಿತವಾಗಿದೆ. ಇಲಾಖೆಗೆ ಬರುವ ಅನುದಾನವೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇಲಾಖೆ ಕಾರ್ಯಗಳು ಹಿನ್ನೆಲೆಗೆ ಸರಿದಿವೆ. ಅಧಿಕಾರಿಗಳು ಕಲಾವಿದರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಮಾಸಾಶನ ನಂಬಿ ಕೂತವರಿಗೆ ಬದುಕು ನಡೆಸುವುದು ಕಷ್ಟವಾಗಿದೆ’ ಎಂದು ಹಿರಿಯ ಕಲಾವಿದರೊಬ್ಬರು ಬೇಸರ ಹೊರ ಹಾಕಿದರು.

ಹೆಚ್ಚಾಗದ ಮಾಸಾಶನ: ಕಲಾವಿದರು ಮೃತರಾದ ನಂತರ ಅವರ ಪತ್ನಿಗೆ ನೀಡುತ್ತಿರುವ ಮಾಸಾಶನ ಪ್ರಾರಂಭದಿಂದಲೂ ₹500 ಇದೆ. ಯೋಜನೆ ಜಾರಿಗೊಳಿಸಿದ ದಿನದಿಂದ ಈ ಹಣದಲ್ಲಿ ಹೆಚ್ಚಳವಾಗಿಲ್ಲ. ಮಾಸಾಶನ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ತಂದರೂ ಪ್ರಯೋಜನವಾಗಿಲ್ಲ. ಈ ಬಾರಿಯ ಬಜೆಟ್ನಲ್ಲಿ ಹಣ ಹೆಚ್ಚಿಸುವ ನಿರೀಕ್ಷೆ ಇಟ್ಟುಕೊಂಡವರಿಗೆ ನಿರಾಸೆ ಎದುರಾಗಿತ್ತು. ಇದೀಗ ತಲುಪಬೇಕಾದ ಹಣವೂ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ.

‘ಸರ್ಕಾರದ ಮಾಸಾಶನ ನೆಚ್ಚಿಕೊಂಡಿರುವ ಕಲಾವಿದರು ಬದುಕು ಸಾಗಿಸಲು ಪರದಾಡುತ್ತಿದ್ದಾರೆ. ಸಕಾಲಕ್ಕೆ ಹಣ ಬಿಡುಗಡೆ ಮಾಡಿದರೆ ಜೀವನಕ್ಕೆ ನೆರವಾಗುತ್ತದೆ. ಪ್ರತಿ ಸಾರಿ ಇದೇ ರೀತಿಯಾಗುತ್ತದೆ’ ಎಂದು ಕಲಾವಿದ ಮೆಳೇಹಳ್ಳಿ ದೇವರಾಜ್ ಪ್ರತಿಕ್ರಿಯಿಸಿದರು.

76 ಅರ್ಜಿ ಸಲ್ಲಿಕೆ 2020–21ನೇ ಸಾಲಿನಿಂದ ಇದುವರೆಗೆ ಮಾಸಾಶನ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 76 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಒಬ್ಬರಿಗೂ ಮಾಸಾಶನ ಸಿಕ್ಕಿಲ್ಲ. ನಾಲ್ಕು ವರ್ಷಗಳಿಂದ ಸಲ್ಲಿಕೆಯಾದ ಅರ್ಜಿಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ ಅರ್ಜಿ ಪರಿಶೀಲಿಸಿ ಮಾಸಾಶನ ಮಂಜೂರಾತಿ ಮಾಡುವ ಕಾರ್ಯ ವೇಗ ಪಡೆದಿಲ್ಲ. ಹಿರಿಯ ಕಲಾವಿದರು ಮಾಸಾಶನಕ್ಕಾಗಿ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ. ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ‘47 ಅರ್ಜಿಗಳು ಇಲಾಖೆ ಹಂತದಲ್ಲಿ ಪರಿಶೀಲನೆಯಲ್ಲಿವೆ 29 ಅರ್ಜಿಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂಬುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.