ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 17 ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ರಾಜ್ಯ ಸರ್ಕಾರದ ಆದೇಶದಂತೆ ಪಾಲಿಕೆಯಿಂದ ಹದ್ದುಬಸ್ತು ಮಾಡಿ ಶೀಘ್ರ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಭರವಸೆ ನೀಡಿದರು.

ನಿವೇಶನ ರಹಿತರಿಗೆ ವಸತಿ ಸಮುಚ್ಚಯ ನಿರ್ಮಿಸಲು 40 ಎಕರೆ ಸರ್ಕಾರಿ ಭೂಮಿ ಗುರುತಿಸಿದ್ದು, ಈಗಾಗಲೇ 17.20 ಎಕರೆ ಭೂಮಿಯನ್ನು ಪಾಲಿಕೆ ಆಯುಕ್ತರ ಹೆಸರಿಗೆ ವರ್ಗಾಯಿಸಲಾಗಿದೆ. ಕನಿಷ್ಠ 2 ಸಾವಿರ ನಿವೇಶನ ರಹಿತರಿಗೆ ವಸತಿ ನಿರ್ಮಿಸಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ಲಂ ಜನಾಂದೋಲನಾ– ಕರ್ನಾಟಕ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಸಮಿತಿಯಿಂದ ಹಮ್ಮಿಕೊಂಡಿದ್ದ ‘ಕಲ್ಪತರು ನಾಡಿನಲ್ಲಿ ಸ್ಲಂ ನಿವಾಸಿಗಳ ಹೋರಾಟ’ ಪುಸ್ತಕ ಬಿಡುಗಡೆ, ನಿವೇಶನ ರಹಿತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕೆಲವೊಂದು ರಾಜಕೀಯ ಕಾರಣಗಳಿಗೆ 20 ವರ್ಷಗಳಿಂದ ನಗರದಲ್ಲಿರುವ ನಿವೇಶನ ರಹಿತರಿಗೆ ನಿವೇಶ ನೀಡಿಲ್ಲ. ಬೇಡಿಕೆ ಸಮೀಕ್ಷೆ ಸಮಯದಲ್ಲಿ 21 ಸಾವಿರ ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಪಟ್ಟಿ ಪರಿಶೀಲಿಸಿದಾಗ 3 ಸಾವಿರ ಅರ್ಜಿಗಳು ಅರ್ಹತೆ ಹೊಂದಿದ್ದು ಈ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ನೈಜ ನಿವೇಶನ ರಹಿತರಿಗೆ ಅವಕಾಶ ಕಲ್ಪಿಸಲು ಆಶ್ರಯ ಸಮಿತಿ ಮೂಲಕ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯಲಾಗುವುದು. ಕೊಳೆಗೇರಿ ಸಮಿತಿ ಸಲ್ಲಿಸಿರುವ 395 ಫಲಾನುಭವಿಗಳ ಪಟ್ಟಿಯನ್ನು ಆದ್ಯತೆಯ ಮೇಲೆ ಆಶ್ರಯ ಸಮಿತಿಯಲ್ಲಿ ಸೇರಿಸಲು ಕ್ರಮವಹಿಸಲಾಗುವುದು ಎಂದರು.

ಘೋಷಣೆಯಾಗಿರುವ 14 ಸ್ಲಂಗಳಲ್ಲಿ 1,450 ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು ಕೆಲವೊಂದು ದಾಖಲಾತಿ, ವಂತಿಗೆ ಹಣ ಕಟ್ಟಲು ಸಾಧ್ಯವಾಗದೆ ಫಲಾನುಭವಿಗಳು ಮುಂದೆ ಬರುತ್ತಿಲ್ಲ. ಕೋವಿಡ್ನಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ರಫೀಕ್ ಅಹ್ಮದ್, ‘ನನ್ನ ಅವಧಿಯಲ್ಲಿ ಕೊಳೆಗೇರಿಗಳ ಅಭಿವೃದ್ಧಿ, ಹಕ್ಕುಪತ್ರ ವಿತರಣೆ, ದಿಬ್ಬೂರಿನಲ್ಲಿ 1,200, ರಾಜೀವ್ ಅವಾಸ್ ಯೋಜನೆಯಲ್ಲಿ 1,688 ಮನೆಗಳ ನಿರ್ಮಾಣ ಮಾಡಲಾಯಿತು. ಮಾರಿಯಮ್ಮ ನಗರಕ್ಕೆ ಸ್ಮಾರ್ಟ್ ಸಿಟಿಯಿಂದ ಅನುಮೋದನೆ ದೊರಕಿಸಿಕೊಟ್ಟಿದ್ದು, ಇಂದಿನ ಶಾಸಕರು ಅನುಷ್ಠಾನಗೊಳಿಸಿದ್ದಾರೆ’ ಎಂದು ತಿಳಿಸಿದರು.

ಮೇಯರ್ ಬಿ.ಜಿ.ಕೃಷ್ಣಪ್ಪ, ‘ಸ್ಲಂಗಳಲ್ಲಿರುವ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅಸಮಾನತೆ ಹೋಗಲಾಡಿಸಬೇಕು’ ಎಂದರು.

ಆಯುಕ್ತರಾದ ರೇಣುಕಾ, ‘ನಿವೇಶನ ರಹಿತರು ಅರ್ಜಿ ಪಡೆಯಲು ರಾಜೀವ್ಗಾಂಧಿ ವಸತಿ ನಿಗಮದಿಂದ ಅನುಮೋದನೆ ಪಡೆದು, ಅವಕಾಶ ಕಲ್ಪಿಸಲಾಗುವುದು. ಕೊಳಚೆ ಪ್ರದೇಶಗಳಿಗೆ 24/7 ಉಚಿತವಾಗಿ ನೀರು ನೀಡಲು ಪಾಲಿಕೆ ಸಭೆಯಲ್ಲಿ ನಿರ್ಧಾರ ಕೈಗೊಂಡು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ಕೆ.ದೊರೈರಾಜ್, ‘ಕೊಳೆಗೇರಿ ಸಮಿತಿಯ ನಿರಂತರ ಹೋರಾಟದಿಂದ ಹಲವು ಯೋಜನೆಗಳು ಸ್ಲಂ ಜನರಿಗೆ ತಲುಪಲು ಸಾಧ್ಯವಾಗಿವೆ. ಮುಂದಿನ ದಿನಗಳಲ್ಲಿ ಸರ್ಕಾರಗಳ ನೀತಿಗಳ ಮೇಲೆ ಮತ ಚಲಾಯಿಸಬೇಕು’ ಎಂದು ಸಲಹೆ ಮಾಡಿದರು.

ಮುಖಂಡ ಸೈಯದ್ ಮುಜೀಬ್, ಪಾಲಿಕೆ ಸದಸ್ಯ ಲಕ್ಷ್ಮಿನರಸಿಂಹರಾಜು, ದಿಶಾ ಸಮಿತಿಯ ಕುಂದರನಹಳ್ಳಿ ರಮೇಶ್, ವಿ.ವಿ ಸಿಂಡಿಕೇಟ್ ಸದಸ್ಯ ವಿನಯ್ ಜೈನ್, ಎಂಜಿನಿಯರ್ ಲೋಕೇಶ್ವರಪ್ಪ, ಸಂಘಟನೆ ಮುಖಂಡರಾದ ಎ.ನರಸಿಂಹಮೂರ್ತಿ, ದೀಪಿಕ, ಅರುಣ್, ತಿರುಮಲಯ್ಯ, ಮಂಗಳಮ್ಮ, ಶೆಟ್ಟಾಳಯ್ಯ, ಶಂಕರಯ್ಯ, ಚಕ್ರಪಾಣಿ, ಮೋಹನ್, ರಂಗನಾಥ್, ಧನಂಜಯ, ಹಯಾತ್, ಕೆಂಪಣ್ಣ, ಗಂಗಮ್ಮ, ಶಾರದಮ್ಮ, ನಿವೇಶನ ರಹಿತರ ಹೋರಾಟ ಸಮಿತಿಯ ಹನುಮಕ್ಕ, ಸುನಂದ, ಸುಧಾ, ತಿಮ್ಮಕ್ಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.