ಎಟಿಎಂ ಕಳವಿಗೆ ಯತ್ನ
ಪ್ರಜಾವಾಣಿ ವಾರ್ತೆ
ತುಮಕೂರು: ತಾಲ್ಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಮಂಗಳವಾರ ಬೆಳಗಿನ ಜಾವ ಎಸ್ಬಿಐ ಎಟಿಎಂ ಯಂತ್ರ ದರೋಡೆಗೆ ಕಳ್ಳರು ವಿಫಲ ಯತ್ನ ನಡೆಸಿದ್ದಾರೆ.
ಇತ್ತೀಚೆಗೆ ಹೆಗ್ಗೆರೆಯಲ್ಲಿ ಎಟಿಎಂ ಯಂತ್ರವನ್ನು ದರೋಡೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಇಲ್ಲೂ ದರೋಡೆಗೆ ಪ್ರಯತ್ನ ನಡೆದಿದೆ. ಮೊದಲಿಗೆ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ನಂತರ ಗ್ಲಾಸ್ ಡೋರ್ ಒಡೆದುಹಾಕಿ, ಸೈರನ್ ವೈರ್ ಕತ್ತರಿಸಿದ್ದಾರೆ.
ಎಟಿಎಂ ಸಮೀಪ ಟಾಟಾ ಏಸ್ ವಾಹನ ನಿಲ್ಲಿಸಿದ್ದು, ಅದನ್ನು ರಿಪೇರಿ ಮಾಡುವಂತೆ ನಟಿಸಿದ್ದಾರೆ. ಎಟಿಎಂ ಯಂತ್ರಕ್ಕೆ ಹಗ್ಗ ಕಟ್ಟಿದ್ದು, ವಾಹನದ ಸಹಾಯದಿಂದ ಎಳೆದು ತಂದು ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಿದ್ದಾರೆ. ಯಂತ್ರಕ್ಕೆ ಕಟ್ಟಿದ್ದ ಹಗ್ಗ ತುಂಡಾಗಿದ್ದು, ದರೋಡೆ ಪ್ರಯತ್ನ ವಿಫಲಗೊಂಡಿದೆ. ಹಗ್ಗವನ್ನು ಅಲ್ಲೇ ಬಿಟ್ಟು ಬಂದ ದಾರಿಗೆ ಸುಂಕವಿಲ್ಲದೆ ತೆರಳಿದ್ದಾರೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.