ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್ ಕುದುರೆ ಫಾರ್ಮ್‌ ರಕ್ಷಣೆಗೆ ಬೆಂಗಳೂರು ಟು ಕುಣಿಗಲ್‌ ಬೈಕ್‌ ರ‍್ಯಾಲಿ

Published 18 ಫೆಬ್ರುವರಿ 2024, 21:07 IST
Last Updated 18 ಫೆಬ್ರುವರಿ 2024, 21:07 IST
ಅಕ್ಷರ ಗಾತ್ರ

ಕುಣಿಗಲ್: ಕುಣಿಗಲ್‌ ಕುದುರೆ ಫಾರ್ಮ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್‌ ನಿರ್ಮಾಣ ಖಂಡಿಸಿ ಬೆಂಗಳೂರಿನ ವೃಕ್ಷ ಫೌಂಡೇಷನ್ ಮತ್ತು ಬೈಕ್ ರೈಡರ್ಸ್ ತಂಡಗಳು ಭಾನುವಾರ ಬೆಂಗಳೂರಿನಿಂದ ಕುಣಿಗಲ್‌ವರೆಗೆ ಬೈಕ್ ‌ರ‍್ಯಾಲಿ ನಡೆಸಿದರು.

ಬೆಂಗಳೂರಿನ ಜಯನಗರದಿಂದ ‘ಸ್ಟಡ್ ಫಾರ್ಮ್‌ ಉಳಿಸಿ’ ಎಂಬ ಘೋಷವಾಕ್ಯ ಇದ್ದ ಬಾವುಟ ಪ್ರದರ್ಶಿಸುತ್ತ ಬಂದ ತಂಡಗಳು ಪಟ್ಟಣದ ಹುಚ್ಚಮಾಸ್ತಿ ಗೌಡ ವೃತ್ತದಲ್ಲಿ ಸಭೆ ನಡೆಸಿದರು.

ಕುಣಿಗಲ್ ಕುದುರೆ ಫಾರ್ಮ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್‌ ಮಾಡುವುದರಿಂದ ಕುದುರೆ ತಳಿ ಸಂವರ್ಧನ ಕೇಂದ್ರ ಹಾಗೂ ಅದರ ಸುಂದರ ಪರಿಸರದಲ್ಲಿರುವ ಪ್ರಾಣಿ, ಪಕ್ಷಿ ಮತ್ತು ಮರಗಳ ಸಂಪತ್ತು ನಶಿಸಲಿದೆ. ಕುದುರೆ ಫಾರ್ಮ್‌ ಉಳಿವಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ವಿದೇಶಗಳಿಂದಲೂ ಬೆಂಬಲ ಸಿಗುತ್ತಿದೆ. ಹೋರಾಟ ಮುಂದುವರೆಸಲಾಗುವುದು ಎಂದು ವೃಕ್ಷ ಫೌಂಡೇಶನ್‌ನ ವಿಜಯ್ ನಿಶಾಂತ್ ಹೇಳಿದರು.

ಕುದುರೆ ಫಾರ್ಮ್‌ ಉಳಿವು ಹೋರಾಟ ಸಮಿತಿಯ ಬಿ.ಎಂ. ಹುಚ್ಚೇಗೌಡ, ಬಿ.ಎನ್. ಜಗದೀಶ್, ಜಿ.ಕೆ.ನಾಗಣ್ಣ, ಕೆ.ಎಲ್.ಹರೀಶ್, ತರೀಕೆರೆ ಪ್ರಕಾಶ್, ಬೈಕ್ ರೈಡರ್ಸ್ ತಂಡದ ಮಾಧವ್, ಚೇತನ್, ಚೈತ್ರಾ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT