‘ಭಗತ್ ಸಿಂಗ್ ದೇಶದ ಪ್ರಗತಿಗೆ ಮಾರಕವಾಗಿದ್ದ ಕೋಮುವಾದ, ಅಸಮಾನತೆ, ಶೋಷಣೆ, ಅಹಿಂಸೆಯ ವಿರುದ್ಧ ಹೋರಾಡಿದ್ದರು. ಉಳ್ಳವರ ಪರವಾದ ಸಾಮಾಜಿಕ ವ್ಯವಸ್ಥೆ ನಾಶಗೊಳಿಸಿ, ಸಮಾಜವಾದಿ ವ್ಯವಸ್ಥೆಯ ನಿರ್ಮಾಣವಾಗಬೇಕು ಎಂದು ಕನಸು ಕಂಡಿದ್ದರು. ಪ್ರಸ್ತುತ ಭಾರತಕ್ಕೆ ಭಗತ್ ಸಿಂಗ್ ಅವರ ವಿಚಾರಗಳು ಆಶಾಕಿರಣವಾಗಿವೆ’ ಎಂದು ಎಐಎಂಎಸ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ವಿ.ಕಲ್ಯಾಣಿ ಅಭಿಪ್ರಾಯಪಟ್ಟರು.