ತಾಲ್ಲೂಕಿನ ಬಂದ್ರೇನಹಳ್ಳಿ ನಿವಾಸಿ ಅನಿಲ್ ಕುಮಾರ್(35), ಕೊಡಿಗೇನಹಳ್ಳಿ ಹೋಬಳಿ ತೆರೆಯೂರು ಗ್ರಾಮದ ಗೌತಮ್ (35) ಮೃತರು.
ಪಾವಗಡದಿಂದ ಮಧುಗಿರಿಗೆ ತೆರಳುತ್ತಿದ್ದ ಬೈಕ್ ಮತ್ತು ಮಧುಗಿರಿಯಿಂದ ಪಾವಗಡದತ್ತ ಹೊರಟಿದ್ದ ಮತ್ತೊಂದು ಬೈಕ್ ಮುಖಾಮುಖಿಯಾಗಿ ಅಪಘಾತ ಅಪಘಾತ ಸಂಭವಿಸಿದೆ.
ಮಧುಗಿರಿ ಸಿಪಿಐ ಹನುಮಂತರಾಯಪ್ಪ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಯಿತು. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.