ತುಮಕೂರು: ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರು ಎನ್ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ನಗರದಲ್ಲಿ ಬುಧವಾರ ಮತಯಾಚನೆ ಮಾಡಿದರು.

ದೇವರಾಯಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಿವಿಧೆಡೆ ಪ್ರಚಾರ ನಡೆಸಿದರು.

ದೇಶದ ಭವಿಷ್ಯ ನಿರ್ಧರಿಸುವ, ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕನ ಆಯ್ಕೆ ಮಾಡುವಂತಹ ಮಹತ್ವದ ಚುನಾವಣೆ ಇದಾಗಿದೆ. ನರೇಂದ್ರ ಮೋದಿ ಮೊತ್ತೊಮ್ಮೆ ಪ್ರಧಾನಿಯಾಗಬೇಕು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹ ಮೋದಿ ನಾಯಕತ್ವ ಒಪ್ಪಿ ಚುನಾವಣೆ ಎದುರಿಸಲು ಒಟ್ಟಾಗಿದ್ದಾರೆ ಎಂದು ಜ್ಯೋತಿಗಣೇಶ್ ಹೇಳಿದರು.

ಅನುಭವಿ ನಾಯಕ ವಿ.ಸೋಮಣ್ಣ ಅವರನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಲಿದ್ದಾರೆ ಎಂದರು.

ಮುಖಂಡರಾದ ಡಾ.ಪರಮೇಶ್, ಎಸ್.ಶಿವಪ್ರಸಾದ್, ಎಸ್.ಪಿ.ಚಿದಾನಂದ್, ಎಚ್.ಎನ್.ಚಂದ್ರಶೇಖರ್, ಹನುಮಂತರಾಜು, ಟಿ.ಆರ್.ನಾಗರಾಜು, ವಿಜಯ್ಗೌಡ, ರಂಗನಾಥ್, ಸೋಲಾರ್ ಕೃಷ್ಣಮೂರ್ತಿ, ನವಚೇತನ್, ನಿರ್ಮಲಾ ಶಿವಕುಮಾರ್, ಮಂಜುನಾಥ್, ಚಂದ್ರಕಲಾ ಪುಟ್ಟರಾಜು, ಮುನಿಯಪ್ಪ, ಡಿ.ಅರ್.ಬಸವರಾಜು, ಲೋಕೇಶ್, ಜಯಪುರ ಮಂಜುನಾಥ್, ಹನುಮಂತರಾಯಪ್ಪ, ಬಿ.ಪಿ.ಅಂಜನಮೂರ್ತಿ, ಸುರೇಶ್ಬಾಬು, ವಿರೂಪಾಕ್ಷಪ್ಪ, ಆಂಜನಪ್ಪ, ಗಣೇಶ್ ಜಿ.ಪ್ರಸಾದ್, ಸತ್ಯಮಂಗಲ ಜಗದೀಶ್, ನವೀನ್ ಜಯಪುರ, ಪ್ರೇಮಾ ಹೆಗಡೆ, ಜ್ಯೋತಿ ತಿಪ್ಪೇಸ್ವಾಮಿ, ತಾಹೇರಾ ಕುಲ್ಸಂ, ಲೀಲಾವತಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.