ಚೇಳೂರು: ಮನೆಯಲ್ಲಿಟ್ಟಿದ್ದ ಚಿನ್ನದ ಸರ ಕದ್ದಿದ್ದ ಕಳ್ಳನನ್ನು ಬಂಧಿಸಿರುವ ಚೇಳೂರು ಠಾಣೆ ಪೊಲೀಸರು ಆತನಿಂದ ₹3.50 ಲಕ್ಷ ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ವಶಕ್ಕೆ ಪಡೆದಿದ್ದಾರೆ.

ಹಾಗಲವಾಡಿ ಗ್ರಾಮದ ಎಚ್.ಎಸ್.ಸುದೀಶ್ (41) ಬಂಧಿತ ಕಳ್ಳ. ಹಾಗಲವಾಡಿಯ ಸಿದ್ದರಾಮಕ್ಕ ತಮ್ಮ ಮನೆಯ ಹಾಲ್ನಲ್ಲಿ ಮಲಗಿದ್ದರು. ಮಾಂಗಲ್ಯ ಸರ ಬಿಚ್ಚಿ ದಿಂಬಿನ ಕೆಳಗಡೆ ಇಟ್ಟಿದ್ದರು. ನಿದ್ದೆಯಿಂದ ಎಚ್ಚರಗೊಂಡಾಗ ಚಿನ್ನದ ಸರ ಕಾಣೆಯಾಗಿತ್ತು. ಈ ಕುರಿತು ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ರಚಿಸಿದ ವಿಶೇಷ ತಂಡ ಕಳ್ಳನನ್ನು ಬಂಧಿಸಿದೆ. ಗುಬ್ಬಿ ಠಾಣೆ ಸಿಪಿಐ ಟಿ.ಆರ್.ರಾಘವೇಂದ್ರ, ಚೇಳೂರು ಪೊಲೀಸ್ ಠಾಣೆಯ ಪಿಎಸ್ಐ ಜೆ.ಆರ್.ನಾಗರಾಜು, ಸಿಬ್ಬಂದಿ ನಾಗೇಶ್, ನಾಗಭೂಷಣ್, ವಿ.ದೀಪಕ್, ಅಶೋಕ್ಕುಮಾರ್, ನಾಗರಾಜು ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.