ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಿಷ್ಕಾರ ಅಳವಡಿಸಿಕೊಂಡರೆ ಬದಲಾವಣೆ ಸಾಧ್ಯ

ನಿರ್ವಹಣೆಯಲ್ಲಿ ಬದಲಾವಣೆ ಮತ್ತು ಆವಿಷ್ಕಾರ’ ಕುರಿತ ಕಾರ್ಯಾಗಾರದಲ್ಲಿ ಪ್ರೊ.ಎಂ.ಕೆ.ಶ್ರೀಧರ್ ಸಲಹೆ
Last Updated 9 ಮೇ 2019, 20:12 IST
ಅಕ್ಷರ ಗಾತ್ರ

ತುಮಕೂರು: ‘ಆವಿಷ್ಕಾರ ಅಳವಡಿಸಿಕೊಂಡರೆ ಬದಲಾವಣೆ ತರಲು ಸಾಧ್ಯ’ ಎಂದು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ ಹಿರಿಯ ತಜ್ಞ ಪ್ರೊ.ಎಂ.ಕೆ.ಶ್ರೀಧರ್ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಕೌಶಲ ಅಭಿವೃದ್ಧಿ ಕೇಂದ್ರ ಹಾಗೂ ತುಮಕೂರು ವಿವಿಯ ಆಂತರಿಕ ಗುಣಮಟ್ಟದ ಖಾತರಿ ಕೋಶ (ಐಕ್ಯುಎಸಿ) ಆಶ್ರಯದಲ್ಲಿ ಆಯೋಜಿಸಿದ್ಧ ‘ನಿರ್ವಹಣೆಯಲ್ಲಿ ಬದಲಾವಣೆ ಮತ್ತು ಆವಿಷ್ಕಾರ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘18ನೇ ಶತಮಾನದ ಯೋಚನೆಗಳನ್ನು ಇಟ್ಟುಕೊಂಡು 21ನೇ ಶತಮಾನವನ್ನು ಬದಲಾಯಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಅತ್ಯಂತ ತ್ವರಿತ ಗತಿಯ ಬದಲಾವಣೆಗಳು ಸಂಭವಿಸುತ್ತಿದ್ದು, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವು ಹೆಚ್ಚು ಜನಸಂಖ್ಯೆಯುಳ್ಳ ಭಾರತದಂತಹ ದೇಶಗಳಿಗೆ ಸಿಡಿಲಿನಂತೆ ಅಪ್ಪಳಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಆವಿಷ್ಕಾರ ಮನೋಭಾವ ನಾವು ರೂಢಿಸಿಕೊಳ್ಳದೇ ಇದ್ದರೆ ನಾವು ಕೆಲಸ ಮಾಡುವ ಸೇವಾ ವಲಯದಲ್ಲಿ, ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ’ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ‘ವಿಶ್ವವಿದ್ಯಾನಿಲಯದ ಆಡಳಿತ ವಿಭಾಗ, ಅಧ್ಯಯನ ವಿಭಾಗ ಹಾಗೂ ಉಭಯ ಕಾಲೇಜುಗಳ ಸಿಬ್ಬಂದಿಗೆ ಇಂದಿನ ಈ ತರಬೇತಿ ಅರ್ಥಪೂರ್ಣವಾಗಿದೆ’ ಎಂದು ಹೇಳಿದರು.

ಕುಲಸಚಿವ ಪ್ರೊ.ಕೆ.ಎನ್.ಗಂಗಾ ನಾಯಕ್ ಸ್ವಾಗತಿಸಿದರು. ಐಕ್ಯುಎಸಿ ನಿರ್ದೇಶಕ ಪ್ರೊ.ಕೆ.ಜಿ.ಪರಶುರಾಮ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಗಾರದಲ್ಲಿ ವಿವಿಯ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT