ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಗ್ರಾಮದಲ್ಲಿರುವ ಗಿರಿಸಿದ್ದೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜಾ ಕಾರ್ಯಕ್ರಮದ ಪ್ರಯುಕ್ತ ಪಂಜುರ್ಲಿ ದೈವಕ್ಕೆ ಭಕ್ತಿ ಸಮರ್ಪಿಸಲಾಯಿತು.

ತಾಲ್ಲೂಕಿನಲ್ಲಿ ಬುಧವಾರ ನಡೆದ ಕಾರ್ತಿಕ ಮಾಸದ ಪೂಜೆ ಅಂಗವಾಗಿ ಪಂಜುರ್ಲಿಗೆ ಪೂಜೆ ಸಲ್ಲಿಸಲಾಯಿತು. ಕೌಶಲ್ಯ ಅಭಿವೃದ್ಧಿ ನಿಗಮದ ಜಿಲ್ಲಾ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ಹಾಗೂ ಗಿರಿಸಿದ್ದೇಶ್ವರ ಮಠದ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.

ರಾಜಕೀಯ ಬೆಳವಣಿಗೆ ಕುರಿತು ಕಾಂಗ್ರೆಸ್ ಮುಖಂಡರೊಬ್ಬರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯುವ ಕುರಿತು ದೈವದಲ್ಲಿ ಪ್ರಶ್ನಿಸಿದಾಗ,‘ಇಲ್ಲಿಯವರೆಗೂ ಅವರು ಮಾಡಿದ ಪ್ರಯತ್ನವು ಕುಂಠಿತವಾಗಿದ್ದರೂ, ಇನ್ನು ಮುಂದೆ ಅವರು ಕೈಗೊಳ್ಳುವ ಪ್ರಯತ್ನಗಳಿಗೆ ನಾನು ಖಂಡಿತವಾಗಿ ಫಲಿತಾಂಶ ನೀಡುತ್ತೇನೆ’ ಎಂದು ದೈವ ಅಭಯ ನೀಡಿತು.

ಮುರುಳಿಧರ ಹಾಲಪ್ಪ, ದೈವದ ಕೃಪೆಯಿಂದ ಯುವಕರು ದುಶ್ಚಟಗಳನ್ನು ತ್ಯಜಿಸಿ, ಮಾನವ ತತ್ವದ ಮೌಲ್ಯಗಳನ್ನು ಮತ್ತು ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಕಿರಣ್ ಕುಮಾರ್, ಕವಿತ ಕಿರಣ್ ಕುಮಾರ್, ಕೃಷ್ಣೆಗೌಡ, ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.