ಚಿಕ್ಕನಾಯಕನಹಳ್ಳಿ: ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯ ಸಾವಿಗೆ ಕಾರಣರಾದ ಗಂಡ ಗಿರೀಶ್, ಅತ್ತೆ, ಮಾವಂದಿರಾದ ಹನುಮಂತಯ್ಯ ಹಾಗೂ ರೇಣುಕಮ್ಮ ಅವರಿಗೆ ತಿಪಟೂರಿನ ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನಲೆ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿ ಓಟಿಕೆರೆ ನಿವಾಸಿಗಳಾದ ಹನುಮಂತಯ್ಯ, ರೇಣುಕಮ್ಮ ಅವರ ಪುತ್ರ ಗಿರೀಶ್ ಭದ್ರಾವತಿಯ ಲಕ್ಷ್ಮೀ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ತವರು ಮನೆಯವರು ಕೈತುಂಬ ವರದಕ್ಷಿಣೆ ನೀಡಿಲ್ಲ ಎಂದು ತಗಾದೆ ತೆಗೆದು ಗಂಡ, ಅತ್ತೆ, ಮಾವ ಸೇರಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು. ಆಗ ಲಕ್ಷ್ಮಿ ಅವರ ತಂದೆ ತಾಯಿ ವರದಕ್ಷಿಣೆಯಾಗಿ ಆಭರಣ, ಬೈಕ್ ಖರೀದಿಗೆ ಧರ್ಮಸ್ಥಳ ಸಂಘದಿಂದ ₹10 ಸಾವಿರ ಸಾಲ ಕೊಡಿಸಿದ್ದರು. ಅಷ್ಟಕ್ಕೂ ಸುಮ್ಮನಾಗದೆ ಬೈಕ್‌ನ ಸಾಲದ ಕಂತು ಕಟ್ಟುವಂತೆ, ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ಮುಂದುವರಿಸಿದ ಪರಿಣಾಮ 2019ರಲ್ಲಿ ಗಂಡನ ಮನೆಯಲ್ಲಿ ಲಕ್ಷ್ಮೀ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.