ಶೆಟ್ಟಿಕೆರೆ| ರಸ್ತೆ ಸಂಚಾರ ಸವಾಲು: ಗುಂಡಿ ರಸ್ತೆ ಪಯಣಕ್ಕೆ ಬೇಕು ‘ಎಂಟು ಗುಂಡಿಗೆ’
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಮಂಜುನಾಥ್
Published : 30 ಅಕ್ಟೋಬರ್ 2025, 7:32 IST
Last Updated : 30 ಅಕ್ಟೋಬರ್ 2025, 7:32 IST
ಫಾಲೋ ಮಾಡಿ
Comments
ಶೆಟ್ಟಿಕೆರೆ- ಚಿಕ್ಕನಾಯಕನಹಳ್ಳಿ ರಸ್ತೆಯನ್ನು ಎತ್ತಿನಹೊಳೆ ಕಾಮಗಾರಿಗಾಗಿ ಅಗೆಯಲಾಗಿದೆ. ಕೆರೆ ನೀರಿನ ತೇವಾಂಶದಿಂದಾಗಿ ಅನೇಕ ಬಾರಿ ಡಾಂಬರು ಹಾಕಿದರು ಸುಧಾರಣೆಗೊಂಡಿಲ್ಲ. ಶೆಟ್ಟಿಕೆರೆಯಿಂದ ಬಾಚಿಹಳ್ಳಿಯವರೆಗೆ ಹೊಸ ರಸ್ತೆ ನಿರ್ಮಿಸುವುದು ಸೂಕ್ತ.
ತೇಜು, ಶೆಟ್ಟಿಕೆರೆ
ಶೆಟ್ಟಿಕೆರೆ ಮಾರ್ಗದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಿದರೆ ಎಷ್ಟೋ ಜೀವಗಳ ಉಳಿಸಿದಂತಾಗುತ್ತದೆ. ಈ ಮಾರ್ಗದಲ್ಲಿ ಸಂಚಾರಿಸುವ ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದಿದ್ದಾರೆ. ಈ ಬಗ್ಗೆ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು.
ಮಂಜುನಾಥ್, ಪ್ರಾವಿಜನ್ ಸ್ಟೋರ್
ಶೆಟ್ಟಿಕೆರೆ ರಸ್ತೆಯ ತುಂಬಾ ಗುಂಡಿಗಳಾಗಿ ಸಂಚರಿಸಲು ಆಗದ ಸ್ಥಿತಿ ತಲುಪಿದೆ. ಮಾತಾ ಗಾರ್ಮೆಂಟ್ಸ್ ಹಂಪ್ಸ್ ಬಳಿಯ ಗುಂಡಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.
ವಸಂತ್, ಕೋಡಿಪಾಳ್ಯ
ಪ್ರತಿದಿನ ನೂರಾರು ವಿದ್ಯಾರ್ಥಿಗಳು ಕುಪ್ಪೂರು ನವಿಲೇ ಮಾರ್ಗವಾಗಿ ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಈ ಗುಂಡಿ ಬಿದ್ದ ರಸ್ತೆಗಳಿಂದಾಗಿ ಅನಾಹುತವಾದರೆ ಅದಕ್ಕೆ ಯಾರು ಹೊಣೆ? ವಾಹನಗಳು ಬೇಗನೆ ದುರಸ್ತಿಗೆ ಬರುವುದರಿಂದ ಆರ್ಥಿಕ ಹೊರೆಯಾಗುತ್ತಿದೆ