ಗುರುವಾರ , ಜುಲೈ 7, 2022
23 °C

ಬೆಂಗಳೂರಿಗೆ ಬಂದಾಗ ಫೋನ್ ಮಾಡಿ: ಸಿಎಂಗೆ ಎಚ್‌.ಡಿ. ದೇವೇಗೌಡ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ‘ಬೆಂಗಳೂರಿಗೆ ಯಾವಾಗ ಬರುತ್ತೀರಿ. ಬಂದಾಗ ಫೋನ್ ಮಾಡಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಇದರಲ್ಲಿ ವಿಶೇಷವೇನೂ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರದಲ್ಲಿ ಗುರುವಾರ ಸಚಿವ ಜೆ.ಸಿ.ಮಾಧುಸ್ವಾಮಿ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದೇವೇಗೌಡ ಅವರು ಬೆಂಗಳೂರಿಗೆ ಬಂದಾಗ ಫೋನ್ ಮಾಡುವಂತೆ ಮುಖ್ಯಮಂತ್ರಿಗೆ ಹೇಳಿದ್ದರಿಂದ ಈ ಸ್ಪಷ್ಟನೆ ನೀಡಿದರು.

‘ದೇವೇಗೌಡರು ನಮ್ಮ ಹಿರಿಯರು. ಅವರ ಮಾರ್ಗದರ್ಶನ ಯಾವಾಗಲೂ ಇದ್ದೇ ಇರುತ್ತೆ. ರಾಜಕೀಯ ಏನೂ ಮಾತನಾಡಿಲ್ಲ. ಮದುವೆಯಲ್ಲಿ ಭೇಟಿಯಾದಾಗ ಕುಶಲೋಪರಿಯಷ್ಟೇ ನಡೆಯಿತು’ ಎಂದರು.

ಬಿಜೆಪಿ ಬಗ್ಗೆ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮೃದು ಧೋರಣೆ ತಾಳಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಯಾವ ಸಾಫ್ಟೂ ಇಲ್ಲ, ಕಾರ್ನರೂ ಇಲ್ಲ. ಅವರ ರಾಜಕಾರಣ ಅವರು ಮಾಡುತ್ತಾರೆ. ನಮ್ಮ ರಾಜಕಾರಣ ನಾವು ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು