ಮಧುಗಿರಿ ಸೇರಿ ಮೂರು ಜಿಲ್ಲೆ
‘ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುತ್ತೇನೆ. ನನ್ನ ಅವಧಿಯಲ್ಲೇ ಈ ಕೆಲಸ ಆಗುತ್ತದೆ’ ಎಂದು ಕೆ.ಎನ್.ರಾಜಣ್ಣ ಹೇಳಿದರು. ತುಮಕೂರು ಜಿಲ್ಲೆ ವಿಸ್ತೀರ್ಣದಲ್ಲಿ ದೊಡ್ಡದಿದ್ದು, ಮೂರು ಜಿಲ್ಲೆಯಾಗಿಯೂ ಮಾಡಬಹುದು. ಧಾರವಾಡವನ್ನು ಮೂರು ಜಿಲ್ಲೆ ಮಾಡಿದಂತೆ ತುಮಕೂರಿನ ಜತೆಗೆ ಮಧುಗಿರಿ, ತಿಪಟೂರು ಜಿಲ್ಲೆಯನ್ನಾಗಿ ಮಾಡುವ ಅವಕಾಶಗಳಿವೆ ಎಂದರು.