ತುಮಕೂರು: ಆಧುನಿಕ ಮಾಧ್ಯಮಗಳ ಮೂಲಕ ಇಡೀ ಪ್ರಪಂಚದ ಸಂಪರ್ಕ ಸಾಧ್ಯವಾಗಿದೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘ, ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲಾಶ್ರೀ ಅವರು ಬರೆದಿರುವ ‘ಪುಣ್ಯಭೂಮಿ ಭಾರತಿ, ಸುರಮ್ಯಭೂಮಿ ಭಾರತಿ’ ಕೃತಿ ಬಿಡುಗಡೆಮಾಡಿ ಮಾತನಾಡಿದರು.

ಆಧುನಿಕ ಮಾಧ್ಯಮಗಳ ಬೆಳವಣಿಗೆಯಿಂದಾಗಿ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಬಹುದಾಗಿದೆ ಎಂದರು.

ಕಲಾಶ್ರೀ ಅವರು ಪ್ರವಾಸ ಕಥನವನ್ನು ಮನಸ್ಸಿಗೆ ಮುದ ನೀಡುವಂತೆ ಬರೆದಿದ್ದಾರೆ. ಈ ಪುಸ್ತಕ ಓದುವಾಗ ಪ್ರವಾಸ ಮಾಡಿದ ಅನುಭವವಾಯಿತು. ದಿನಚರಿಯ ರೂಪದಲ್ಲಿ ವಿವರ ದಾಖಲಿಸಿದ್ದಾರೆ ಎಂದು ಹೇಳಿದರು.

ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು, ‘ಕಲಾಶ್ರೀ ಅವರ ಪ್ರವಾಸ ಕಥನ ಒಂದೇ ಗುಟುಕಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಸರಳವಾದ ನಿರೂಪಣೆ ಇದೆ’ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ‘ಪ್ರವಾಸ ಕಥನದಲ್ಲಿ ಕಲೆ, ಸಂಸ್ಕೃತಿ, ಪರಿಸರವನ್ನು ದಾಖಲಿಸಲು ಅವಕಾಶವಿರುತ್ತದೆ’ ಎಂದರು.

ಲೇಖಕಿ ಗೀತಾಲಕ್ಷ್ಮಿ ಕೃತಿ ಪರಿಚಯ ಮಾಡಿದರು. ಲೇಖಕಿ ಕಲಾಶ್ರೀ, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಚಂದ್ರಣ್ಣ, ನಿವೃತ್ತ ನೌಕರ ಜಿ.ಸಿ.ಷಡಕ್ಷರಾಧ್ಯ, ಸಿ.ಎ.ಇಂದಿರಮ್ಮ, ಪತ್ರಕರ್ತ ಎಸ್.ನಾಗಣ್ಣ, ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ಮಾತನಾಡಿದರು. ಮರಿಯಂಬಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.