ತುಮಕೂರು: ಸೊಪ್ಪಿನ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದರೆ, ತರಕಾರಿ ದರದಲ್ಲೂ ಹೆಚ್ಚಳವಾಗಿದೆ. ಬಾಳೆಹಣ್ಣು ಏರಿಕೆಯತ್ತ ಮುಖ ಮಾಡಿದ್ದರೆ, ಧಾನ್ಯಗಳು ತುಸು ಇಳಿಕೆಯಾಗಿವೆ. ಮೀನು ಮತ್ತಷ್ಟು ದುಬಾರಿಯಾಗಿದ್ದು, ಕೋಳಿ ಮಾಂಸ ಅಲ್ಪ ತಗ್ಗಿದೆ.

ಬೀನ್ಸ್ ಅಲ್ಪ ಇಳಿಕೆ: ಗಗನಮುಖಿಯಾಗಿದ್ದ ಬೀನ್ಸ್ ಕಳೆದ ವಾರ ಕೊಂಚ ಕಡಿಮೆಯಾಗಿದ್ದು, ಈ ವಾರವೂ ಅಲ್ಪ ತಗ್ಗಿದ್ದು, ಕೆ.ಜಿ ₹100–120ಕ್ಕೆ ಕಡಿಮೆಯಾಗಿದೆ. ಕೆಲ ವಾರಗಳ ಹಿಂದೆ ಕೆ.ಜಿ ₹200 ದಾಟಿತ್ತು. ಇತ್ತೀಚಿನ ದಿನಗಳಲ್ಲಿ ಅರ್ಧದಷ್ಟು ಬೆಲೆ ಕಡಿಮೆಯಾದಂತಾಗಿದೆ.

ಬಹುತೇಕ ದಿನಗಳಿಂದ ತಟಸ್ಥವಾಗಿದ್ದ ಟೊಮೆಟೊ ಧಾರಣೆ ಏರಿಕೆಯತ್ತ ಮುಖ ಮಾಡಿದೆ. ಮೂಲಂಗಿ ದರವೇ ಕೆ.ಜಿ ₹50–60ಕ್ಕೆ ಜಿಗಿದಿದ್ದು, ಇತರೆ ತರಕಾರಿಗಳೂ ಸಹ ಇದೇ ದಾರಿಯಲ್ಲಿ ಸಾಗಿವೆ. ಗೆಡ್ಡೆಕೋಸು, ಆಲೂಗೆಡ್ಡೆ, ನುಗ್ಗೆಕಾಯಿ ಮತ್ತಷ್ಟು ಹೆಚ್ಚಳವಾಗಿದೆ. ಆದರೆ ಈರುಳ್ಳಿ ದರ ಕೆ.ಜಿಗೆ ₹5 ಕಡಿಮೆಯಾಗಿದ್ದು, ಕೆ.ಜಿ ₹15–20ಕ್ಕೆ ಇಳಿಕೆಯಾಗಿದೆ. ಈರುಳ್ಳಿ ಬಿಟ್ಟರೆ ಇತರೆ ಯಾವುದೇ ತರಕಾರಿಯೂ ಇಷ್ಟು ಅಗ್ಗವಾಗಿಲ್ಲ.

ಸೊಪ್ಪು ಗಗನಮುಖಿ: ಕಳೆದ ಕೆಲ ವಾರಗಳಿಂದ ಗಗನಮುಖಿಯಾಗಿರುವ ಸೊಪ್ಪು ಈ ವಾರ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. ಕೊತ್ತಂಬರಿ, ಸಬ್ಬಕ್ಕಿ ಸೊಪ್ಪು ಕೆ.ಜಿ ₹200ರ ಗಡಿಗೆ ತಲುಪಿದ್ದು, ಕಳೆದ ವಾರ 200ಕ್ಕೆ ಮುಟ್ಟಿದ್ದ ಮೆಂತ್ಯ ಸೊಪ್ಪು ತುಸು ತಗ್ಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹180–200, ಸಬ್ಬಕ್ಕಿ ಕೆ.ಜಿ ₹180–200, ಮೆಂತ್ಯ ಸೊಪ್ಪು ಕೆ.ಜಿ ₹150–160, ಪಾಲಕ್ ಸೊಪ್ಪು (ಕಟ್ಟು) ₹80–100ಕ್ಕೆ ಏರಿಕೆಯಾಗಿದೆ.

ಕೆಲ ಸಮಯ ಮಳೆ ಬಂದು ಮತ್ತೆ ಮಾಯವಾಗಿದೆ. ಜೂನ್ ತಿಂಗಳಲ್ಲೂ ಬಿಸಿಲಿನ ಝಳ ಏರುತ್ತಿದ್ದು, ಸೊಪ್ಪು ಬೆಳೆಯುವುದು ಕಷ್ಟಕರವಾಗಿದೆ. ಹಾಗಾಗಿ ಬೆಲೆ ಇದೇ ಸ್ಥಿತಿಯಲ್ಲಿ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ.

ಏಲಕ್ಕಿ ಬಾಳೆ ಮತ್ತೆ ಏರಿಕೆ: ಹಿಂದಿನ ವಾರದಿಂದ ಏರಿಕೆಯತ್ತ ಸಾಗಿರುವ ಏಲಕ್ಕಿ ಬಾಳೆಹಣ್ಣು ಮತ್ತೆ ದುಬಾರಿಯಾಗಿದೆ. ಪೈನಾಪಲ್ ಕೊಂಚ ಇಳಿಮುಖವಾಗಿದ್ದು, ಇತರೆ ಹಣ್ಣುಗಳ ಧಾರಣೆ ಯಥಾಸ್ಥಿತಿ ಕಾಯ್ದುಕೊಂಡಿದೆ. ತೋತಾಪುರಿ ಕೆ.ಜಿ ₹80, ಬೆನಿಷಾ ಕೆ.ಜಿ ₹80ಕ್ಕೆ ಮಾರಾಟವಾಗುತ್ತಿದೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ಕೊಂಚ ಏರಿಕೆಯಾಗಿದ್ದು, ಕಡಲೆ ಕಾಯಿ ಎಣ್ಣೆ ಕೆ.ಜಿಗೆ ₹5 ಹೆಚ್ಚಳವಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹108–110, ಪಾಮಾಯಿಲ್ ಕೆ.ಜಿ ₹88–89, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ, ಧಾನ್ಯ ಇಳಿಕೆ: ಕಳೆದ ವಾರ ಒಮ್ಮೆಲೆ ಹೆಚ್ಚಳವಾಗಿದ್ದ ಬೇಳೆ ಕಾಳು, ಧಾನ್ಯಗಳ ಧಾರಣೆ ಈಗ ತುಸು ಇಳಿಕೆಯಾಗಿದೆ. ತೊಗರಿ ಬೇಳೆ, ಹೆಸರು ಬೇಳೆ, ಕಡಲೆಕಾಳು, ಹೆಸರು ಬೇಳೆ, ಅಲಸಂದೆ ಕಡಿಮೆಯಾಗಿದ್ದರೆ, ಅವರೆ ಕಾಳು, ಶೇಂಗಾ, ಹುರಿಗಡಲೆ ದುಬಾರಿಯಾಗಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಬ್ಯಾಡಗಿ ಮೆಣಸಿನ ಕಾಯಿ, ಜೀರಿಗೆ, ಮೆಂತ್ಯ, ಲವಂಗ ಕೊಂಚ ತಗ್ಗಿದ್ದರೆ, ಸಾಸಿವೆ, ಗೋಡಂಬಿ, ಹುಣಸೆಹಣ್ಣು ಅಲ್ಪ ಹೆಚ್ಚಳವಾಗಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹220–230, ಹುಣಸೆಹಣ್ಣು ₹130–160, ಕಾಳುಮೆಣಸು ಕೆ.ಜಿ ₹650–660, ಜೀರಿಗೆ ಕೆ.ಜಿ ₹340–350, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹85–90, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹900–950, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,300, ಬಾದಾಮಿ ಕೆ.ಜಿ ₹630–660, ಗೋಡಂಬಿ ಕೆ.ಜಿ ₹650–720, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಅಲ್ಪ ಇಳಿಕೆ: ಈ ವಾರ ಕೋಳಿ ಮಾಂಸದ ಬೆಲೆ ಕೊಂಚ ತಗ್ಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹170, ರೆಡಿ ಚಿಕನ್ ಕೆ.ಜಿ ₹260, ಸ್ಕಿನ್‌ಲೆಸ್ ಕೆ.ಜಿ ₹300, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹125ಕ್ಕೆ ಸಿಗುತ್ತಿದೆ.

ಮೀನು ದುಬಾರಿ: ಮೀನಿನ ದರ ಮತ್ತಷ್ಟು ದುಬಾರಿಯಾಗಿದ್ದು, ಬಂಗುಡೆ, ಅಂಜಲ್, ಬೂತಾಯಿ, ಸೀಗಡಿ ಬೆಲೆ ಸಾಕಷ್ಟು ಜಿಗಿದಿದೆ. ಬಂಗುಡೆ ಕೆ.ಜಿ ₹350, ಬೂತಾಯಿ ಕೆ.ಜಿ ₹300, ಬೊಳಿಂಜರ್ ಕೆ.ಜಿ ₹200, ಅಂಜಲ್ ಕೆ.ಜಿ ₹1,360, ಬಿಳಿಮಾಂಜಿ ಕೆ.ಜಿ ₹1,460, ಕಪ್ಪುಮಾಂಜಿ ಕೆ.ಜಿ ₹1,080, ಇಂಡಿಯನ್ ಸಾಲ್ಮನ್ ಕೆ.ಜಿ ₹960, ಸೀಗಡಿ ಕೆ.ಜಿ ₹470–670, ಏಡಿ ಕೆ.ಜಿ 650ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ದರ ಪಟ್ಟಿ.....

ಹಣ್ಣು (ಬೆಲೆ ಕೆ.ಜಿ ₹)

ಸೇಬು;200

ದಾಳಿಂಬೆ;200

ಮೂಸಂಬಿ;80

ಕಿತ್ತಳೆ;130

ಸಪೋಟ;100

ಏಲಕ್ಕಿ ಬಾಳೆ;75–80

ಪಚ್ಚಬಾಳೆ;35–40

ಸೀಬೆ;120

ಪೈನಾಪಲ್;70

ಪಪ್ಪಾಯ;20

ಕರಬೂಜ;50

ಕಲ್ಲಂಗಡಿ;20

ದ್ರಾಕ್ಷಿ;50

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;170–175

ಕಡಲೆ ಬೇಳೆ;85–90

ಉದ್ದಿನ ಬೇಳೆ;145–160

ಹೆಸರು ಬೇಳೆ;115–120

ಕಡಲೆಕಾಳು;78–82

ಹೆಸರು ಕಾಳು;120–125

ಅಲಸಂದೆ;100–110

ಅವರೆಕಾಳು;140–160

ಹುರುಳಿಕಾಳು;75–80

ಹುರಿಗಡಲೆ;100–110

ಬಟಾಣಿ;95–100

ಕಡಲೆ ಬೀಜ;125–130

ಗೋಧಿ;36–44

ಸಕ್ಕರೆ;41–42

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;100–120

ಕ್ಯಾರೇಟ್;40–50

ಬೀಟ್ರೂಟ್;30–40

ಈರುಳ್ಳಿ;15–20

ಬೆಳ್ಳುಳ್ಳಿ;160–180

ಟೊಮೆಟೊ;25–30

ಆಲೂಗಡ್ಡೆ;35–40

ಗೆಡ್ಡೆಕೋಸು;50–60

ಮೂಲಂಗಿ;50–60

ಬೆಂಡೆಕಾಯಿ;40–50

ಬದನೆಕಾಯಿ;25–30

ಎಲೆಕೋಸು;25–30

ಹೂಕೋಸು(1ಕ್ಕೆ);40

ತೊಂಡೆಕಾಯಿ;30–40

ಹಾಗಲಕಾಯಿ;40–50

ನುಗ್ಗೆಕಾಯಿ;60–70

ಮೆಣಸಿನಕಾಯಿ;70–80

ಕ್ಯಾಪ್ಸಿಕಂ;40–50

ಶುಂಠಿ;100–120

ಸೌತೆಕಾಯಿ 1ಕ್ಕೆ;6–8

ನಿಂಬೆಹಣ್ಣು 1ಕ್ಕೆ;5–6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.