ತುಮಕೂರು: ಜಿಲ್ಲೆಯಲ್ಲಿ ಶನಿವಾರ ಮತ್ತೆ 25 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 453ಕ್ಕೆ ಏರಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಮಂದಿ ಕೊರೊನಾ ಸೋಂಕಿತರು ಶನಿವಾರ ಬಿಡುಗಡೆಯಾದರು. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 106 ಮಂದಿ ಗುಣಮುಖರಾಗಿದ್ದಾರೆ. 334 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

ತುಮಕೂರಿನ ಮಹಾಲಕ್ಷ್ಮಿನಗರದ 58 ವರ್ಷದ ಪುರುಷ, ವಕ್ಕೊಡಿ ಹೊಸಬಡಾವಣೆಯ 58 ವರ್ಷದ ಮಹಿಳೆ, ಎಸ್ಐಟಿ ಬಡಾವಣೆಯ 42 ವರ್ಷದ ಪುರುಷ, ವಿಜಯನಗರದ 61 ವರ್ಷದ ಪುರುಷ, ಪಿ.ಎಚ್.ಕಾಲೊನಿಯ 62 ವರ್ಷದ ಪುರುಷ, ಮಲ್ಲಸಂದ್ರದ 58, 75 ವರ್ಷದ ಮಹಿಳೆ, ಸದಾಶಿವನಗರದ 36 ವರ್ಷದ ಮಹಿಳೆ, ಎಸ್.ಎಸ್.ಪುರಂನ 39 ವರ್ಷದ ಮಹಿಳೆ, ರಾಘವೇಂದ್ರ ನಗರದ 40 ವರ್ಷದ ಮಹಿಳೆ, ಕೋತಿತೋಪಿನ 26 ವರ್ಷದ ಮಹಿಳೆ, ವಿನಾಯಕನಗರದ 37 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.

ಶನಿವಾರ ನಗರದಲ್ಲಿ ವರದಿಯಾದ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ. ತುಮಕೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.

ಸೋಂಕಿತರ ಮನೆಗಳನ್ನು ಈಗಾಗಲೇ ಸೀಲ್ಡೌನ್ ಮಾಡಲಾಗಿದೆ. ಆ ಮನೆಗಳ ಸುತ್ತಮುತ್ತಲಿನ ಮನೆಗಳವರು ಹೆದರಿ ತಮ್ಮ ಮನೆಗಳಿಗೆ ಬೀಗ ಹಾಕಿ ಬೇರೆಡೆ ತೆರಳಿದ್ದಾರೆ. ಎಸ್.ಎಸ್.ಪುರಂ, ಅಶೋಕನಗರ, ಎಸ್ಐಟಿ ಬಡಾವಣೆಗಲ್ಲಿ ಒಂದೊಂದೇ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂದು ಈ ರಸ್ತೆಯ ಒಂದು ಮನೆ ಸೀಲ್ಡೌನ್ ಆದರೆ ಮರು ದಿನ ಪಕ್ಕದ ರಸ್ತೆಯ ಮತ್ತೊಂದು ಮನೆ ಸೀಲ್ಡೌನ್ ಆಗುತ್ತಿದೆ.

ತುಮಕೂರು ಹೊರತುಪಡಿಸಿದರೆ ಶಿರಾ, ಪಾವಗಡದಲ್ಲಿ ಸೋಂಕಿತರ ಸಂಖ್ಯೆ ಅರ್ಥಶತಕ ದಾಟಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 566 ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 829 ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.

ಚಿ.ನಾ.ಹಳ್ಳಿ;0;28;0
ಗುಬ್ಬಿ;1;28;0
ಕೊರಟಗೆರೆ;0;33;1
ಕುಣಿಗಲ್;1;24;1
ಮಧುಗಿರಿ;1;43;0
ಪಾವಗಡ;3;54;0
ಶಿರಾ;6;50;1
ತಿಪಟೂರು;1;18;0
ತುಮಕೂರು;12;165;10
ತುರುವೇಕೆರೆ;0;10;0
ಒಟ್ಟು;25;453;13

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.