ಭಾನುವಾರ, ಜೂನ್ 13, 2021
24 °C
ಗುರುವಾರ ಮತ್ತೆ 116 ಮಂದಿಯಲ್ಲಿ ಕೊರೊನಾ ಸೋಂಕು ದೃಢ

ತುಮಕೂರು | ಶತಕದತ್ತ ಸಾವಿನ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 92ಕ್ಕೆ ತಲುಪಿದೆ. ಗುರುವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಮತ್ತೆ ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಗುರುವಾರ ಮತ್ತೆ 116 ಮಂದಿಗೆ ಸೋಂಕು ದೃಢವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 3,119ಕ್ಕೆ ತಲುಪಿದೆ.

ಪಿ.ಎಚ್.ಕಾಲೊನಿ 53 ವರ್ಷದ ಪುರುಷ, ಸದಾಶಿವನಗರ 60 ವರ್ಷದ ಮಹಿಳೆ, ತಿಪಟೂರು ಗೋವಿಂದಪುರದ 55 ವರ್ಷದ ಪುರುಷ ಮೃತಪಟ್ಟಿದ್ದಾರೆ.

125 ಮಂದಿ ಗುಣಮುಖ: ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ 125 ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದರು. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಟ್ಟು 2,008 ಮಂದಿ ಗುಣಮುಖರಾಗಿದ್ದು 1,019 ಸಕ್ರಿಯ ಪ್ರಕರಣಗಳು ಇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.