ತುಮಕೂರು: 1,211 ಆರೋಗ್ಯ ಕಾರ್ಯಕರ್ತೆಯರಿಗೆ ಲಸಿಕೆ

ತುಮಕೂರು: ಕೋವಿಶೀಲ್ಡ್ ಲಸಿಕ್ ಅಭಿಯಾನಕ್ಕೆ ನಗರದ ಜಿಲ್ಲಾ ಆಸ್ಪತ್ರೆ, ಕ್ಯಾತ್ಸಂದ್ರ, ಕೋತಿತೋಪು ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಶ್ರೀದೇವಿ ಆಸ್ಪತ್ರೆ ಮತ್ತು ತಾಲ್ಲೂಕು ಕೇಂದ್ರಗಳ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಮೊದಲ ದಿನ 1,211 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಮೊದಲ ಸುತ್ತಿನಲ್ಲಿ 20,040 ಮಂದಿ ಹೆಸರು ನೋಂದಾಯಿಸಿದ್ದಾರೆ.
ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಶನಿವಾರ ಲಸಿಕೆ ಪಡೆಯಲು ಬಂದವರಿಗೆ ವೆಲ್ ಕಮ್ ಟು ಕೋವಿಡ್ ಲಸಿಕೆ ಎಂಬ ರಂಗೋಲಿ ಚಿತ್ತಾರ ಬಿಡಿಸಿ ಬರಮಾಡಿಕೊಳ್ಳಲಾಯಿತು.
ಮೊದಲಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಲಸಿಕೆ ಪಡೆದರು. ಬಳಿಕ ಉಳಿದವರು ಲಸಿಕೆ ಹಾಕಿಸಿಕೊಂಡರು.
ಈ ವೇಳೆ ಡಾ.ರಜಿನಿ, ಡಾ.ವೀಣಾ, ಡಾ.ಕೇಶವರಾಜ್, ಡಾ.ಮೋಹನ್ ದಾಸ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.