ಮಂಗಳವಾರ, ಸೆಪ್ಟೆಂಬರ್ 29, 2020
28 °C
ಬುಧವಾರ ಮತ್ತೆ 128 ಮಂದಿಗೆ ಸೋಂಕು

ತುಮಕೂರು: ತಾಲ್ಲೂಕುಗಳಲ್ಲಿ ಶತಕ ದಾಟಿದ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಬುಧವಾರ 128 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 2,209 ಮಂದಿಗೆ ಸೋಂಕು ತಗುಲಿದೆ. ಸಾವಿನ ಸಂಖ್ಯೆ 65ಕ್ಕೆ ತಲುಪಿದೆ.

ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತುಮಕೂರಿನ ದಾನನಗರದ 45 ವರ್ಷದ ಮಹಿಳೆ, ಪಿ.ಎಚ್.ಕಾಲೊನಿ 65 ವರ್ಷದ ವ್ಯಕ್ತಿ ಮೃತರಾಗಿದ್ದಾರೆ. ಎಲ್ಲ ತಾಲ್ಲೂಕುಗಳಲ್ಲಿಯೂ ಸೋಂಕಿತರು 100ರ ಗಡಿ ದಾಟಿದ್ದಾರೆ. ತುಮಕೂರಿನಲ್ಲಿ ನಿತ್ಯವೂ ಗರಿಷ್ಠ ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆಯೂ ಜಿಲ್ಲಾ ಕೇಂದ್ರದಲ್ಲಿಯೇ ಹೆಚ್ಚು.

ಬುಧವಾರ ವರದಿಯಾದ ಪ್ರಕರಣಗಳಲ್ಲಿ ಐದು ವರ್ಷದ ಒಳಗಿನ ಇಬ್ಬರು ಮಕ್ಕಳಿಗೆ ಸೋಂಕು ತಗುಲಿದೆ. 69 ಪುರುಷರು, 59 ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.

90 ಮಂದಿ ಗುಣಮುಖ: ಬುಧವಾರ ಮತ್ತೆ 90 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗಳಿಗೆ ತೆರಳಿದರು. ಇಲ್ಲಿವರೆಗೆ 1,200 ಮಂದಿ ಗುಣಮುಖರಾಗಿದ್ದು 944 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇವೆ.

********

ತಾಲ್ಲೂಕು;ಇಂದಿನ ಸೋಂಕಿತರು (ಆ.5);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;7;124;3

ಗುಬ್ಬಿ;6;108;3

ಕೊರಟಗೆರೆ;25;133;2

ಕುಣಿಗಲ್;28;234;3

ಮಧುಗಿರಿ;9;158;3

ಪಾವಗಡ;2;168;1

ಶಿರಾ;21;150;3

ತಿಪಟೂರು;1;131;1

ತುಮಕೂರು;27;898;46

ತುರುವೇಕೆರೆ;2;105;0

ಒಟ್ಟು;128;2209;65

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು