ಪಾವಗಡ: ಸೀಮೆ ಎಣ್ಣೆ ಸ್ಟೌ ಹಚ್ಚುವಾಗ ಬೆಂಕಿ ತಗುಲಿ ತಾಲ್ಲೂಕಿನ ಎ.ಎಚ್.ಪಾಳ್ಯದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ.

ಎ.ಎಚ್.ಪಾಳ್ಯದ ನವೀನ್ ಕುಮಾರ್ (23) ಮೃತರು. ಶುಕ್ರವಾರ ಸೀಮೆ ಎಣ್ಣೆ ಸ್ಟೌ ಅನ್ನು ಬಿಸಿ ನೀರು ಕಾಯಿಸಲು ಹಚ್ಚಿದ್ದಾರೆ. ಆಕಸ್ಮಿಕವಾಗಿ ಬೆಂಕಿ ವ್ಯಾಪಿಸಿ ದೇಹದ ಹಿಂಬದಿ ಭಾಗ ಸುಟ್ಟಿದೆ.

ನವೀನ್ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಗಾಯಾಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ಕುಟುಂಬ ಸದಸ್ಯರು ಶನಿವಾರ, ಸಾವಿಗೆ ವೈದ್ಯರು, ಸಿಬ್ಬಂದಿ ಕಾರಣ ಎಂದು ಸರ್ಕಾರಿ ಆಸ್ಪತ್ರೆ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಸುಟ್ಟ ಗಾಯಗಳಾಗಿದ್ದರು ಗಾಯಾಳು ಲವ ಲವಿಕೆಯಿಂದಿದ್ದರು. ರಾತ್ರಿ ಔಷಧಿ ಸೇವಿಸಿದ ನಂತರ ಮೃತಪಟ್ಟಿದ್ದಾರೆ ಎಂದು ಮೃತರ ಪತ್ನಿ ಆರೋಪಿಸಿದರು. ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಾ ನಿರತರ ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.