ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಎಣ್ಣೆ ದರ ಇಳಿಕೆ

Last Updated 20 ಜೂನ್ 2021, 16:24 IST
ಅಕ್ಷರ ಗಾತ್ರ

ತುಮಕೂರು: ಗಗನ ಮುಟ್ಟಿದ್ದ ಅಡುಗೆ ಎಣ್ಣೆ ಬೆಲೆ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಕೆಲ ಹಣ್ಣುಗಳ ಧಾರಣೆಯೂ ದುಬಾರಿಯಾಗಿದೆ. ಒಂದು ಹಂತಕ್ಕೆ ಇಳಿಕೆಯಾಗಿರುವ ಸೊಪ್ಪಿನ ಬೆಲೆ ಬಹುತೇಕ ಸ್ಥಿರವಾಗಿರುವುದು ಈ ವಾರದ ಮಾರುಕಟ್ಟೆಯ ವಿಶೇಷ.

ಸನ್‌ಫ್ಲವರ್ ಎಣ್ಣೆ ಲೀಟರ್ ₹160ಕ್ಕೆ, ಪಾಮಾಯಿಲ್ ಲೀಟರ್ ₹120ಕ್ಕೆ ಇಳಿಕೆಯಾಗಿದೆ. ತೊಗರಿ ಬೇಳೆ, ಹೆಸರು ಬೇಳೆ ಬೆಲೆ ತಲಾ ಕೆ.ಜಿ ₹5 ಕಡಿಮೆಯಾಗಿದ್ದರೆ, ಕಡಲೆ ಬೇಳೆ ಕೆ.ಜಿ ₹5 ಹೆಚ್ಚಳವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಮಂಡಿ
ಪೇಟೆಯಲ್ಲಿ ಕುಸಿದಿದ್ದ ವಹಿವಾಟು, ಲಾಕ್‌ಡೌನ್ ಸಡಿಲಿಕೆ ನಂತರ ಸ್ವಲ್ಪ ಮಟ್ಟಿಗೆ ಚಟುವಟಿಕೆಗಳು ಕಂಡುಬರುತ್ತಿವೆ.

ಸೌತೆ ದುಬಾರಿ: ಬೀನ್ಸ್ ಬೆಲೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಕ್ಯಾರೇಟ್, ಬಿಟ್ರೂಟ್, ಹಸಿಮೆಣಸಿನ ಕಾಯಿ ಧಾರಣೆ ತಲಾ ಕೆ.ಜಿ ₹5 ತಗ್ಗಿದ್ದರೆ, ಬೆಂಡೆಕಾಯಿ ಕೆ.ಜಿ ₹10,ಟೊಮೆಟೊ ಕೆ.ಜಿ ₹5, ಬದನೆಕಾಯಿ ಕೆ.ಜಿ ₹10 ಹೆಚ್ಚಳವಾಗಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸೌತೆಕಾಯಿ ಬೆಲೆ ತೀವ್ರವಾಗಿ ಏರಿಕೆ ಕಂಡಿದ್ದು, ಒಂದು ಕಾಯಿಗೆ ₹10ಕ್ಕೆ ತಲುಪಿದೆ.
ಚಿಲ್ಲರೆಯಾಗಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೊತ್ತಂಬರಿ, ಸಬ್ಬಕ್ಕಿ, ಮೆಂತ್ಯ ಸೊಪ್ಪು ತಲಾ ಕೆ.ಜಿ ₹35ಕ್ಕೆ, ಪಾಲಕ್
ಸೊಪ್ಪು ಕೆ.ಜಿ ₹25–30ಕ್ಕೆ ಮಾರಾಟವಾಗಿದೆ.

ಹಣ್ಣುಗಳ ಬೆಲೆ ಇಳಿಕೆಯಾಗುತ್ತಲೇ ಇಲ್ಲ. ಸೇಬಿನ ಬೆಲೆ ಕೇಳುವಂತೆಯೇ ಇಲ್ಲ. ಉತ್ತಮ ಗುಣಮಟ್ಟದ ಸೇಬು ಕೆ.ಜಿ ₹300 ತಲುಪಿದೆ. ಸಪೋಟ, ಸೀಬೆ ತಲಾ ಕೆ.ಜಿ ₹20 ದುಬಾರಿ
ಯಾಗಿದೆ. ಕೆ.ಜಿ ₹150 ದಾಟಿದ್ದ ಕಿತ್ತಳೆ ಹಣ್ಣು ₹100ಕ್ಕೆ, ದ್ರಾಕ್ಷಿ, ಪಚ್ಚಬಾಳೆ ಹಣ್ಣಿನ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಮಾವಿನ ಹಣ್ಣಿನ ಸೀಸನ್ ಮುಗಿಯುತ್ತಾ ಬಂದಿದ್ದು, ಬೆಲೆ ಹೆಚ್ಚಾಗುತ್ತಿದೆ.

ಕೋಳಿ ಬೆಲೆ ಏರಿಕೆ: ಕೋಳಿ ಬೆಲೆ ಕೆ.ಜಿ.ಗೆ ₹20 ಹೆಚ್ಚಳವಾಗಿದ್ದು, ಬ್ರಾಯ್ಲರ್ ಕೆ.ಜಿ ₹130ಕ್ಕೆ, ರೆಡಿ ಚಿಕನ್ ಕೆ.ಜಿ ₹200, ಮೊಟ್ಟೆ ಕೋಳಿ ಕೆ.ಜಿ
₹130ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT