ಸೋಮವಾರ, ನವೆಂಬರ್ 30, 2020
19 °C

ರಸಗೊಬ್ಬರ ಮಾರಾಟದಲ್ಲಿ ಲೋಪ: ತುಮಕೂರಿನಲ್ಲಿ ಅಧಿಕಾರಿಗಳಿಂದ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ಉಪವಿಭಾಗದ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಲ್ಲಿರುವ ರಸಗೊಬ್ಬರ ಅಂಗಡಿಗಳ ಮೇಲೆ ಕೃಷಿ ಆಧಿಕಾರಿಗಳು ಕ್ಷಿಪ್ರ ದಾಳಿ ನಡೆಸಿದ್ದಾರೆ. 

ಈ ವೇಳೆ ರಸಗೊಬ್ಬರ ಮಾರಾಟದಲ್ಲಿ ಲೋಪ ಕಂಡು ಬಂದ 34 ಅಂಗಡಿ ಮಾಲೀಕರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.   

ಗಂಭೀರ ಲೋಪವೆಸಗಿದ 6 ಮಾರಾಟಗಾರರಿಗೆ ಸ್ಥಳದಳಲ್ಲಿಯೇ ಮಾರಾಟ ತಡೆ ಅದೇಶ ಜಾರಿ ಮಾಡಲಾಯಿತು.

ಮುಂದಿನ ದಿನಗಳಲ್ಲಿ ಇದೇ ಲೋಪವೆಸಗಿದರೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.

ಇದೇ ರೀತಿ ಜಿಲ್ಲೆಯ‌‌ ವಿವಿಧೆಡೆ ಅನಿರೀಕ್ಷಿತ ದಾಳಿ ಮುಂದುವರೆಯಲಿದ್ದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಪಿ.ಓ.ಎಸ್ ಬಿಲ್‌ ನೀಡದೇ ಇರುವುದು ಹಾಗೂ ಅಕ್ರಮ ದಾಸ್ತಾನು ಮೂಲಕ ರೈತರಿಗೆ ತೊಂದರೆಯಾದರೆ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಸಿದರು.

ಈ ವಾರದಲ್ಲಿ ನಡೆದ ಸತತ 3ನೇ ದಾಳಿ ಇದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು