ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಕೆರೆಗೆ ಬಿದ್ದು ವ್ಯಕ್ತಿ ಸಾವು

Published 17 ಜೂನ್ 2024, 3:05 IST
Last Updated 17 ಜೂನ್ 2024, 3:05 IST
ಅಕ್ಷರ ಗಾತ್ರ

ತುಮಕೂರು: ನಗರ ಹೊರವಲಯದ ಅರಕೆರೆ ಬಳಿ ಕೆರೆಗೆ ಬಿದ್ದು ಶ್ರೀನಿವಾಸ್‌ (35) ಎಂಬುವರು ಭಾನುವಾರ ಮೃತಪಟ್ಟಿದ್ದಾರೆ.

ಶ್ರೀನಿವಾಸ್‌ ಕೊರಟಗೆರೆ ತಾಲ್ಲೂಕಿನ ಮಧ್ಯ ವೆಂಕಟಾಪುರ ಗ್ರಾಮದ ನಿವಾಸಿ. ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಹೂವಿನ ವ್ಯಾಪಾರ ಮಾಡುತ್ತಿದ್ದರು. ಕೆರೆಯಲ್ಲಿ ತಾವರೆ ಹೂವು ಅರಳಿದ್ದು, ಅದನ್ನು ಕೀಳಲು ಹೋದಾಗ ಜಾರಿ ಬಿದ್ದಿದ್ದಾರೆ. ಶ್ರೀನಿವಾಸ್‌ ಜತೆಗೆ ಚಿಕ್ಕಹನುಮಯ್ಯ (56), ಕೆಂಪರಾಮಯ್ಯ (60) ಎಂಬುವರ ಬಂದಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ಕೆರೆಗೆ ಬಿದ್ದಿರುವ ವಿಷಯ ಗೊತ್ತಾಗಿದೆ.

ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹ ಹೊರ ತೆಗೆಯಲು ಪ್ರಯತ್ನಿಸಿದರು. ಕತ್ತಲಾದ ನಂತರ ಮೃತದೇಹ ಹೊರತೆಗೆಯುವ ಕೆಲಸ ನಿಲ್ಲಿಸಿದ್ದು, ಸೋಮವಾರ ಬೆಳಗ್ಗೆ ಕಾರ್ಯಾಚರಣೆಯ ಮುಂದುವರಿಯಲಿದೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT