ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೃಹಲಕ್ಷ್ಮಿ’ಗೆ ಗೃಹಿಣಿಯರು ಫಿದಾ

ಗೃಹಲಕ್ಷ್ಮಿಗೆ ಚಾಲನೆ, ಪ್ರತಿ ತಿಂಗಳು ₹116 ಕೋಟಿ ವರ್ಗಾವಣೆ
Published 30 ಆಗಸ್ಟ್ 2023, 16:17 IST
Last Updated 30 ಆಗಸ್ಟ್ 2023, 16:17 IST
ಅಕ್ಷರ ಗಾತ್ರ

ತುಮಕೂರು: ಚಿಕ್ಕದಾದ ಬಾಡಿಗೆ ಮನೆಯಲ್ಲಿದ್ದವರಿಗೆ ದೊಡ್ಡ ಮನೆ ಮಾಡಲು ₹2 ಸಾವಿರ ನೆರವಾಗುತ್ತದೆ. ವಿಧವೆಯರಿಗೆ, ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಗೃಹಲಕ್ಷ್ಮಿ ಯೋಜನೆಯ ಕುರಿತು ಗೃಹಿಣಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕೇಂದ್ರ ಗ್ರಂಥಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇರಿದ್ದ ಮಹಿಳೆಯರು ಅಭಿಪ್ರಾಯ ಹಂಚಿಕೊಂಡರು.

‘ಸರ್ಕಾರ ನೀಡುವ ಹಣದಿಂದ ಸಣ್ಣ–ಪುಟ್ಟ ವ್ಯವಹಾರ ಶುರು ಮಾಡಿ ಬದುಕು ಕಟ್ಟಿ ಕೊಳ್ಳಬಹುದು. ಹಣ ನೀಡುತ್ತಿರುವ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು. ಇಂದಿನಿಂದ ನಮ್ಮ ಮನೆಗೆ ಲಕ್ಷ್ಮಿ ಬರುತ್ತಿದ್ದಾಳೆ. ₹2 ಸಾವಿರ ಸಣ್ಣ ದುಡ್ಡಲ್ಲ.‌ ಇದರಿಂದ ಒಂದು ಕುಟುಂಬ ಒಂದು‌‌ ತಿಂಗಳು ಬದುಕಬಹುದು. ಬೀಡಿ ಸುತ್ತುವವರಿಗೆ, ಕೈಗಾರಿಕೆಗಳಲ್ಲಿ ಕೆಲಸ ಮಾಡುವವರಿಗೆ ಈ ಹಣ ಸಹಾಯಕವಾಗಲಿದೆ’ ಎಂದು ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಈ ಹಿಂದೆ ಒಂದೊತ್ತಿನ ಊಟಕ್ಕೂ ಪರದಾಡಿದ್ದೇವು. ಅನ್ನ ಭಾಗ್ಯ, ಮಕ್ಕಳಿಗೆ ಕ್ಷೀರ ಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ ಕಾಂಗ್ರೆಸ್‌ನವರು ನೂರು ವರ್ಷ ಸಂತೋಷ, ಸುಖವಾಗಿ ಇರಲಿ’ ಎಂದು ನಗರದ ಶಿರಾ ಗೇಟ್ ಬಳಿಯ ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿ ಮೆಹರುನ್ನೀಸಾ ಆಶಿಸಿದರು.

ಜಿಲ್ಲೆಯಲ್ಲಿ ಪ್ರತಿ ತಿಂಗಳು ₹116 ಕೋಟಿ ಹಣ ನೇರ ನಗದು ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ. ಜಿಲ್ಲೆಯಲ್ಲಿ ಈದುವರೆಗೆ 5,80,129 ಜನರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ 1.35 ಲಕ್ಷ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ, ನೋಂದಣಿ ಮಾಡಿಕೊಳ್ಳುವ ಕುರಿತು ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಮಹಾನಗರ ಪಾಲಿಕೆ ಮೇಯರ್‌ ಎಂ.ಪ್ರಭಾವತಿ, ಉಪಮೇಯರ್‌ ಟಿ.ಕೆ.ನರಸಿಂಹಮೂರ್ತಿ, ಜಿ.ಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತೆ ಅಶ್ವಿಜ, ಉಪವಿಭಾಗಾಧಿಕಾರಿ ಗೌರವ್‍ಕುಮಾರ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ್, ಮಹಿಳಾ ಮತ್ತು ಮಕ್ಕಳ ಅಧಿಕಾರಿ ಪವಿತ್ರಾ ಇತರರು ಭಾಗವಹಿಸಿದ್ದರು.

ಪಟ್ಟಿ...

ವಿಧಾನಸಭಾ ಕ್ಷೇತ್ರ;ನೋಂದಣಿ:ಶೇ

ಚಿಕ್ಕನಾಯಕನಹಳ್ಳಿ;50,792;89.67

ಗುಬ್ಬಿ;59,941;89.87

ಕೊರಟಗೆರೆ;49,681;88.95

ಕುಣಿಗಲ್;49,681;86.32

ಮಧುಗಿರಿ;58,122;85.49

ಪಾವಗಡ;52,977;88.12

ಶಿರಾ;69,512;87.14

ತಿಪಟೂರು;50,836;87.14

ತುಮಕೂರು ಗ್ರಾಮಾಂತರ;64,632;88.31

ತುಮಕೂರು ನಗರ;45,952;75.56

ತುರುವೇಕೆರೆ;39,685;88.03

ಒಟ್ಟು;5,80,129;86.78

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT