ಭಾನುವಾರ, ಅಕ್ಟೋಬರ್ 25, 2020
27 °C

ತುಮಕೂರು: ಮೊಟ್ಟೆ ಬೆಲೆಯೂ ಹೆಚ್ಚಳ, ಈ ವಾರವೂ ಕಡಿಮೆಯಾಗದ ಕೋಳಿ ಮಾಂಸದ ಬೆಲೆ

ವಿಠಲ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೋಳಿ ಮಾಂಸದ ಬೆಲೆ ಏರಿಕೆ ಮುಂದುವರಿದಿದ್ದು, ಈ ವಾರವೂ ₹220ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆಯ ಬೆಲೆಯೂ ಹೆಚ್ಚಾಗಿದ್ದು, ಒಂದು ಮೊಟ್ಟೆ ₹5.50ಕ್ಕೆ ಏರಿಕೆ ಯಾಗಿದೆ.

ಮಾಂಸದ ಬೆಲೆಯೂ ಹೆಚ್ಚಾಗಿದೆ. ಎಳೆಯ ಮಟನ್‌ ಕೆ.ಜಿ ₹750, ಸಾಧಾರಣ ಮಟನ್‌ ಕೆ.ಜಿ ₹650 ಇದೆ. ಸಧ್ಯದ ಪರಿಸ್ಥಿತಿಯಲ್ಲಿ ಕೋಳಿ, ಮಟನ್‌ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಹಾಪ್‌ಕಾಮ್ಸ್‌ ಹಣ್ಣಿನ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಸೀಬೆಹಣ್ಣು ಕೆ.ಜಿ ₹50, ಸೇಬು ₹100– 120ಕ್ಕೆ ಮಾರಾಟವಾಗುತ್ತಿದೆ. ಏಲಕ್ಕಿ ಬಾಳೆ ಹಣ್ಣು ಕೆ.ಜಿ ₹60ರಿಂದ ₹65ಕ್ಕೆ ಇದೆ. ಸಪೋಟಾ ₹100, ಕಿತ್ತಳೆ ₹100ಕ್ಕೆ ಮಾರಾಟವಾಗುತ್ತಿದೆ. ಆಯುಧ ಪೂಜೆಯವರೆಗೆ ಬಾಳೆಹಣ್ಣಿನ ಬೆಲೆ ಒಂದೇ ರೀತಿ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಹಾಪ್‌ಕಾಮ್ಸ್‌
ಮಳಿಗೆಯ ಟಿ.ಆರ್‌.
ನಾಗರಾಜು.

ಬೇಳೆ ಕಾಳು ಸ್ಥಿರ: ನಗರದ ಮಂಡಿಪೇಟೆಯಲ್ಲಿ ಬೇಳೆ ಕಾಳುಗಳ ಬೆಲೆ ಸ್ಥಿರವಾಗಿದೆ. ಕಳೆದ ಕೆಲವು ವಾರಗಳಿಂದ ದಿನಸಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.

ಹೆಚ್ಚಾದ ಮೀನು ಬೆಲೆ: ನಗರದ ಮತ್ಯ್ಸದರ್ಶಿನಿಯಲ್ಲಿ ಶುಕ್ರವಾರ ಬಂಗುಡೆ ಕೆ.ಜಿಗೆ ₹220ಕ್ಕೆ ಮಾರಾಟವಾಗುತ್ತಿತ್ತು. ಶನಿವಾರ ₹110 ಹೆಚ್ಚಾಗಿ ಕೆ.ಜಿಗೆ ₹330ರಂತೆ ಮಾರಾಟವಾಯಿತು. ಬೂತಾಯಿ ₹200, ಅಂಜಲ್‌ ₹730, ಏಡಿ ₹320ಕ್ಕೆ ಹಾಗೂ ಕಪ್ಪು ಮಾಂಜಿ ಕೆ.ಜಿಗೆ ₹530ರಂತೆ ಮಾರಾಟವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು