ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೇಷ್ಠ ವಿಜ್ಞಾನಿ ಪಟ್ಟಿ: ವಿ.ವಿ ನಾಲ್ವರಿಗೆ ಸ್ಥಾನ

Published : 21 ಸೆಪ್ಟೆಂಬರ್ 2024, 6:23 IST
Last Updated : 21 ಸೆಪ್ಟೆಂಬರ್ 2024, 6:23 IST
ಫಾಲೋ ಮಾಡಿ
Comments

ತುಮಕೂರು: ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ನಾಲ್ವರು ಪ್ರಾಧ್ಯಾಪಕರು ಸ್ಥಾನ ಪಡೆದುಕೊಂಡಿದ್ದಾರೆ.

ಭೌತಶಾಸ್ತ್ರ ವಿಭಾಗದ ಪ್ರೊ.ಎಚ್.ನಾಗಭೂಷಣ, ಜೀವ ರಸಾಯನಶಾಸ್ತ್ರ ವಿಭಾಗದ ಪ್ರೊ.ಕೆ.ಎಸ್.ಗಿರೀಶ್, ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಚಂದ್ರಾಲಿ ಬೈಶ್ಯ ಹಾಗೂ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಸುರೇಶ್ ಸ್ಥಾನ ಪಡೆದವರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾದ ‘ಸ್ಕೋಪಸ್’ ಸೂಚ್ಯಂಕ ಹೊಂದಿರುವ ಸಂಶೋಧನಾ ಪ್ರಕಟಣೆಗಳು, ಉಲ್ಲೇಖಗಳು, ಸಹ-ಲೇಖಕ ಸಂಶೋಧನೆಗಳ ಪ್ರಕಟಣೆಗಳು, ಎಚ್- ಇಂಡೆಕ್ಸ್‌ಗಳನ್ನು ಪರಿಶೀಲಿಸಿದ ನಂತರ ವಿಶ್ವದ ಶೇ. 2 ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ವಿ.ವಿ ಪ್ರಕಟಣೆ ತಿಳಿಸಿದೆ.

ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರಗಳು ಹಾಗೂ 174 ಉಪ ಕ್ಷೇತ್ರಗಳಾಗಿ ವರ್ಗೀಕರಿಸಲಾಗುತ್ತದೆ. ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ತಮ್ಮ ಸಂಶೋಧನಾ ಸಾಧನೆಗಳ ಮೂಲಕ ಇದರಲ್ಲಿ ಗುರುತಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT